ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಶಾಶ್ವತ ತಲೆನೋವಾಗಿ ಪರಿಣಮಿಸಿರುವ ಪ್ರತ್ಯೇಕತಾವಾದಿಗಳ ಹೋರಾಟದ ಭಾಗವೇ ಆಗಿರುವ ಕಲ್ಲು ತೂರಾಟಗಾರರಿಗೆ ಭಾರತೀಯ ಸೇನೆಯ ಸ್ಪೆಷಲ್ ಪ್ಲಾನ್ ಭರ್ಜರಿ ಶಾಕ್ ನೀಡಿದ್ದು, ಮೊದಲ ದಿನವೇ ನಾಲ್ವರನ್ನು ಬಂಧಿಸಿದೆ.
ಇಸ್ರೇಲ್‌ನಲ್ಲಿ ನಡೆಯುತ್ತಿದ್ದ ಕಲ್ಲು ತೂರಾಟವನ್ನು ಅಲ್ಲಿನ ಸೇನೆ ಹತ್ತಿಕ್ಕಿದ ರೀತಿಯಲ್ಲೇ ಭಾರತೀಯ ಸೇನೆಯೂ ಸಹ ಕಾರ್ಯಾಚರಣೆ ನಡೆಸಿದೆ.
ತಲೆ ನೋವಾಗಿ ಪರಿಣಮಿಸಿರುವ ಕಲ್ಲು ತೂರಾಟಗಾರರನ್ನು ಹೇಗಾದರೂ ಮಾಡಿ ಹತ್ತಿಕ್ಕಲೇ ಬೇಕು ಎಂದು ರಣವೀಳ್ಯ ಪಡೆದಿರುವ ಭಾರತೀಯ ಸೇನೆ ಹಾಗೂ ಕಾಶ್ಮೀರ ಪೊಲೀಸರು, ಕಲ್ಲು ತೂರಾಟಗಾರರ ರೀತಿಯಲ್ಲೇ ವೇಷ ಧರಿಸಿ, ಅವರೊಂದಿಗೇ ಸೇರಿಕೊಂಡು, ಮೊದಲ ದಿನವೇ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
J & K Police adopted a fresh strategy of nabbing stone pelters by planting its men among them at historic Jama Masjid downtown to arrest the real culprits in action. pic.twitter.com/wd42mUjPsM
— Prashant Patel Umrao (@ippatel) September 7, 2018
ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರದ ಕೆಲ ನುರಿತ ಅಧಿಕಾರಿಗಳು ಕಲ್ಲು ತೂರಾಟದಾರರ ವೇಷ ಧರಿಸಿ ಕಲ್ಲು ತೂರಾಟಗಾರರ ಒಳಗೆ ಸೇರಿಕೊಂಡು ಅವರೂ ಕೂಡ ಸೇನೆಯತ್ತ ಮತ್ತು ಭದ್ರತಾ ಸಿಬ್ಬಂದಿಗಳತ್ತ ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೆ ಸಮಯ ನೋಡಿಕೊಂಡು ನಾಲ್ಪರು ಕಲ್ಲು ತೂರಾಟಗಾರರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಆರ್‌ಪಿಎಫ್ ಯೋಧರ ಪಡೆ ಮೇಲೆ ಮೊನ್ನೆ ಶುಕ್ರವಾರ 100 ಮಂದಿಯ ಗುಂಪು ಕಲ್ಲು ಏಕಾಏಕಿ ಕಲ್ಲು ತೂರಾಟ ನಡೆಸಿ, ದಾಂಧನೆ ಎಬ್ಬಿಸಿದ್ದಾರೆ. ಇದರಿಂದ ಬೇಸತ್ತ ಸೇನೆ ಇದನ್ನು ಹತ್ತಿಕ್ಕಲು ಮಾಸ್ಟರ್ ಪ್ಲಾನ್ ಮಾಡಿದೆ. ಕಲ್ಲು ತೂರಾಟಗಾರರನ್ನು ಬಂಧಿಸಲು ವಿಶೇಷ ಪ್ಲಾನ್ ರೂಪಿಸಿದ ಯೋಧರು ಅವರಂತೆ ವೇಷಧರಿಸಿ ಗುಂಪಿನಲ್ಲಿ ಸೇರಿ, ಪೊಲೀಸರೊಂದಿಗೆ ಯೋಧರ ಪಡೆ ದಾಳಿ ನಡೆಸಿದ್ದು, ಈ ವೇಳೆ ಕಲ್ಲು ತೂರಾಟ ನಡೆಸುತ್ತಿದ್ದ ನಾಲ್ವರು ಯುವ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಯೋಧರ ಪ್ಲಾನ್ ಅರಿಯಲು ವಿಫಲವಾದ ಕಲ್ಲು ತೂರಾಟಗಾರರು ಯುವಕರನ್ನು ವಶಕ್ಕೆ ಪಡೆಯುತ್ತಿದಂತೆ ಕಕ್ಕಾಬಿಕ್ಕಿಯಾಗಿದ್ದು, ಸ್ಥಳದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದೆ ಸ್ಥಳದಿಂದ ಮಂದಿ ಪರಾರಿಯಾಗಿದ್ದಾರೆ.
Discussion about this post