ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಬನಶಂಕರಿ 3 ನೆಯ ಹಂತದ ಗುರುದತ್ತ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದಿಂದ ಗುರುದತ್ತ ಬಡಾವಣೆಯಲ್ಲಿ ಸ್ವಯಂ ಘೋಷಿತ ಸೀಲ್ ಡೌನ್ ಅನ್ನು ಜೂನ್ 1ರಿಂದ ಜಾರಿ ಮಾಡಲಾಗಿದೆ.
ಬನಶಂಕರಿ 3 ನೆಯ ಹಂತದ ಇಟ್ಟಮಡುವಿನಲ್ಲಿ ಮೇ 31 ರ ಭಾನುವಾರ ಕೊರೋನಾ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದು ಆತನನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ನಗರದಲ್ಲಿ ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಕೊರೋನಾ ಸೋಂಕಿತರ ಪ್ರಮಾಣವೂ ಒಂದೇ ಸಮನೆ ಹೆಚ್ಚುತ್ತಿದೆ.
ಸೋಂಕಿತರ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡುವುದು ಬಿಬಿಎಂಪಿ ಹಾಗೂ ಆರೋಗ್ಯ ಅಧಿಕಾರಿಗಳಿಗೆ ತಲೆನೋವಾಗಿದೆ. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಬನಶಂಕರಿ 3 ನೆಯ ಹಂತದ ಗುರುದತ್ತ ಬಡಾವಣೆಯಲ್ಲಿ ಸ್ವಯಂ ಪ್ರೇರಿತರಾಗಿ (ಘೋಷಿತ ) ಸೀಲ್ ಡೌನ್ ಮಾಡಲಾಗಿದೆ.
ಬಡಾವಣೆಯಲ್ಲಿ ಕ್ಷೇಮಾಭಿವೃದ್ಧಿ ಸಂಘದ ಸ್ವಯಂ ಸೇವಕರುಗಳು ಬಡಾವಣೆಗೆ ಸುತ್ತ ಮುತ್ತಲಿನ ಪ್ರದೇಶಗಳಿಂದ ಬೆಳಗ್ಗಿನ ಜಾವ ವಾಕಿಂಗ್ ಬರುವ ಜನರಿಗೆ ಬಡಾವಣೆಯ ಪ್ರವೇಶ ದ್ವಾರದ ಬಳಿ ನಿಂತು ನಿರ್ಭಂಧ ಹೇರಲಾಯಿತ್ತು.
ಕೊರೋನಾ ಪೆಡಂಭೂತದ ಸಮಸ್ಯೆ ನಿವಾರಣೆ ಆಗುವವರೆಗೂ ಈ ನಿರ್ಬಂಧ ಮುಂದುವರೆಯಲಿದ್ದು ಬಡಾವಣೆಗೆ ಸಮೀಪದಲ್ಲಿ ಇರುವ ಇಟ್ಟಮಡು, ಹೊಸಕೆರೆಹಳ್ಳಿ ಹಾಗೂ ದತ್ತಾತ್ರೇಯ ದೇವಾಲಯದ ಸುತ್ತಮುತ್ತಲಿನ ಪ್ರದೇಶದವರು ಹಾಗೂ ಹೊರಗಿನವರು ಬರದಂತೆ ತಡೆಯಲು ಬಡಾವಣೆಯ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಸ್ವಯಂ ಸೇವಕರುಗಳಾದ ತಿಮ್ಮಪ್ಪ ಗೌಡ, ಚಂದ್ರು, ಛಾಯಾಪತಿ ಶಾಸ್ತ್ರಿ, ಚಿಕ್ಕಮರಿಯಪ್ಪ, ಶಿವರಾಮ ಅಡಿಗ, ಜೈದೇವ್ ಸಿಂಗ್, ಮುದ್ದೆ ಗೌಡ್ರು ಹಾಗೂ ಇನ್ನೂ ಅನೇಕರು ಸೇವೆ ಮಾಡುತ್ತಾ ಬಡಾವಣೆಯ ಹಿತ ಕಾಯುವ ಕಾಯಕದಲ್ಲಿ ತೊಡಗಿರುವುದು ಪ್ರಶಂಸನೀಯ ಎಂದರೆ ಅತಿಶಯೋಕ್ತಿಯಲ್ಲ.
ಬಡಾವಣೆಯ ಪಕ್ಕದಲ್ಲಿಯೆ ಕೊರೋನಾ ಕಂಡು ಬಂದಿರುವ ಹಿನ್ನೆಲೆಯಲ್ಲಿ, ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಈ ಕೆಳಗಿನ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗಿ ಕೋರಿಕೆ:
1. ಮಾಸ್ಕ್ ಧರಿಸದೆ ಯಾರು ಬಡಾವಣೆಯ ಹೊರಗಡೆ ಹೊಗಬೇಡಿ
2. ಮನೆ ಕೆಲಸ ಮಾಡಲು ಹೊರಗಡೆಯಿಂದ ಯಾರಿಗೂ ಅನುಮತಿ ಕೊಡಬೇಡಿ
3. ಕಟಿಂಗ್ ಶಾಪ್’ಗೆ ಹೋಗಬೇಡಿ
4. ಹೊರಗಡೆಯಿಂದ ತರಕಾರಿ, ಸೊಪ್ಪು, ಹಣ್ಣು, ಹಳೆ ಸಮಾನು ಮತ್ತು ಯಾವುದೇ ಗಾಡಿಗಳಿಗೆ ಅನುಮತಿ ಇಲ್ಲ
5. ಹೊರಗಡೆಯಿಂದ ವಾಕಿಂಗ್ ಬರುವವರಿಗೆ ಅನುಮತಿ ಇಲ್ಲ
6. ಮೇಲೆ ಕಾಣಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲರೂ ಒಟ್ಟಾಗಿ ಕೈ ಜೋಡಿಸಿ ತಮ್ಮ ಸ್ವಯಂ ಹಿತದೃಷ್ಟಿಯಿಂದ ಸಹಕರಿಸಬೇಕು
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
Get In Touch With Us info@kalpa.news Whatsapp: 9481252093
Discussion about this post