ಹೊಸನಗರ: ನಿಮ್ಮ ಊರಿನ ಯಾವುದೇ ಚರಂಡಿಗಳು ಸ್ವಚ್ಚವಾಗಿಲ್ಲವೆಂದು ಕಂಡುಬಂದಲ್ಲಿ ಪೊಟೊ ತಗೆದು ಕಳುಹಿದರೇ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು.
ನಗರದ ರಂಗಮಂದಿರದಲ್ಲಿ ಮಾರ್ಚ್ ಮೊದಲ ವಾರದಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಂಡಿದ್ದ ಶಾಸಕರು, ಕ್ಷೇತದ ಆಶಾ ಕಾರ್ಯಕರ್ತೆಯರು, ಶ್ರೂಷಕರು, ವೈದ್ಯಾಧಿಕಾರಿಗಳ ಕುಂದುಕೊರತೆ ಹಾಗೂ ಗುಣಮಟ್ಟದ ಆರೊಗ್ಯ ನೀಡುವ ಸರ್ಕಾರದ ಯೋಜನಾ ಅನುಷ್ಠಾನದ ಕುರಿತು ಚರ್ಚೆ ನಡೆಸಿದರು.
ತಾಲೂಕಿನಲ್ಲಿರುವ ವಿಕಲಚೇತನರನ್ನು ಗುರುತಿಸಿ ಸರ್ಕಾರದ ಅನುದಾನಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಅನುದಾನದ ಶೇ.5 ರಷ್ಟು ಹಣ ವಿಕಲಾಂಗ ಚೇತನರಿಗಾಗಿ ಮೀಸಲಿಡಲಾಗುತ್ತದೆ. ಈ ಅನುದಾನ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕಿದೆ. ಶುಶ್ರೂಷಕರು ರೋಗಿಗಳಿಗೆ ಹೆತ್ತವರ ಪ್ರೀತಿ ಕರುಣೆ ಮಮತೆ ತೋರಿಸಿದಲ್ಲಿ ಅರ್ಧ ಕಾಯಿಲೆ ಗುಣವಾದಂತೆ. ತಾವು ವಾಸಿಸುವ ಕಟ್ಟಡಗಳು ಸೊರುತ್ತಿದ್ದರೆ ಕೂಡಲೆ ದುರಸ್ಥಿ ಮಾಡಿಸುತ್ತೇವೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ವೈದ್ಯೋ ನಾರಾಯಣೊ ಹರಿಃ ಎನ್ನುವಂತೆ ವೈದ್ಯರನ್ನ ರೋಗಿಗಳು ದೇವರ ರೂಪದಲ್ಲಿ ಕಾಣುತ್ತಾರೆ. ಸಾರ್ವಜನಿಕರ ಆರೋಗ್ಯ ಸುಧಾರಣೆ ಎಲ್ಲರ ಜವಬ್ದಾರಿ. ಅವರು ಕಟ್ಟು ತೆರಿಗೆಯಲ್ಲಿ ನಾವು ನೀವುಗಳು ಸಂಬಳ ಪಡೆಯುತ್ತೇವೆ. ಅವರಿಂದಲೇ ನಾವು ಹಾಗಾಗಿ ದಿನದ 24 ಗಂಟೆಯೂ ಆಸ್ಪತ್ರೆ ಯಲ್ಲಿ ಸೇವಾ ಸೌಲಭ್ಯ ಸಿಗುವಂತೆ ಮಾಡಬೇಕು ಎಂದರು.
ಸಭೆಯಲ್ಲಿ ಟಿಎಚ್.ಓ ಸುಬ್ಬಯ್ಯ ವೈದ್ಯಕೀಯ ನಿರೀಕ್ಷಕರಾದ ಡಾ.ಬಿ ಶ್ರೀನಿವಾಸ್ ಮೊದಲಾದರು ಉಪಸ್ಥಿತರಿದ್ದರು.

















