ನವದೆಹಲಿ: ಭಾರೀ ನಿರೀಕ್ಷೆ ಹುಟ್ಟಿಸಿದ್ದ 2019ರ ಲೋಕಸಭಾ ಚುನಾವಣೆಗೆ ಆಯೋಗ ನಿನ್ನೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ, ಕೆಲವು ಪ್ರತಿಪಕ್ಷಗಳು ದಿನಾಂಕದ ಬಗ್ಗೆ ಅಪಸ್ವರ ಎತ್ತಲು ಆರಂಭಿಸಿವೆ.
ಚುನಾವಣಾ ದಿನಾಂಕ ಕುರಿತಂತೆ ಅಪಸ್ವರ ತೆಗೆದಿರುವ ಅಮ್ ಅದ್ಮಿ ಪಕ್ಷದ ಅಮಾನತ್ತುಲ್ಲಾ ಖಾನ್, ರಂಜಾಬ್ ಆಚರಣೆ ಮೇ 6ರಂದು ನಡೆಯಲಿದ್ದು, 5, 6, ಹಾಗೂ 7ನೆಯ ಹಂತದ ಮತದಾನ ಮೇ 6, 12 ಹಾಗೂ 19ರಂದು ನಡೆಯಲಿದೆ. ಇದು ಮುಸಲ್ಮಾನರಿಗೆ ಮತದಾನ ಮಾಡಲು ತೊಂದರೆಯಾಗಿದೆ ಎಂದಿದ್ದಾರೆ.
ಇನ್ನು ಈ ಕುರಿತಂತೆ ತೃಣಮೂಲ ಕಾಂಗ್ರೆಸ್ ನಾಯಕ, ಕೊಲ್ಕತ್ತಾ ಮೇಯರ್ ಫಿರ್ಹಾದ್ ಹಕೀಂ, ಬಿಹಾರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ನಿಗದಿಪಡಿಸಿರುವ ಚುನಾವಣಾ ದಿನಾಂಕದ ಅಪಸ್ವರ ತೆಗೆದಿದ್ದಾರೆ.
ಚುನಾವಣಾ ದಿನಾಂಕ ಆಯೋಗ ನಿರ್ಧರಿಸಿದೆ. ಆದರೆ, ಬಗ್ಗೆ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಟಿಎಂಸಿ ನಾಯಕ ಹಾಗೂ ಕೋಲ್ಕತ್ತಾ ಮೇಯರ್ ಅಲ್ಪಸಂಖ್ಯಾತರು ಮತಚಲಾವಣೆ ಮಾಡುವುದು ಬಿಜೆಪಿಗೆ ಬೇಕಿಲ್ಲ. ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ, ಅದನ್ನು ಗೌರವಿಸುತ್ತೇವೆ. ಆಯೋಗದ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ. ಆದರೆ 7 ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದ್ದು, ರಂಜಾನ್ ಆಚರಣೆ ವೇಳೆಯಲ್ಲೇ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಅಲ್ಪಸಂಖ್ಯಾತರಿಗೆ ಸಮಸ್ಯೆಯಾಗಲಿದೆ ಎಂದು ಕಿಡಿ ಕಾರಿದ್ದಾರೆ.
ಪ್ರತಿ ಚುನಾವಣೆ ವೇಳೆಯಲ್ಲಿಯೂ ಸಹ ಇಂತಹ ಅಪಸ್ವರಗಳು ಏಳುತ್ತವೆ. ಆದರೆ, ಆಯೋಗ ಒಂದು ಬಾರಿ ಘೋಷಿಸಿದ ದಿನಾಂಕವನ್ನು ಬದಲಾವಣೆ ಮಾಡಿದ್ದು ಮಾತ್ರ ತೀರಾ ಅಪರೂಪದಲ್ಲಿ ಅಪರೂಪ ಎಂದೇ ಹೇಳಬೇಕು.
Discussion about this post