ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ನಿಮ್ಮ ಮಕ್ಕಳಿಗೆ ಪಿಯುಸಿ ವಿಜ್ಞಾನ ಹಾಗೂ ವಾಣಜ್ಯದಲ್ಲಿ ಅತ್ಯುತ್ತಮ ಶಿಕ್ಷಣ ನೀಡಲು ಬಯಸುತ್ತೀರಾ? ಹಾಗಾದರೆ ನಿಮ್ಮ ಆಯ್ಕೆ ನಿಸ್ಸಂಶಯವಾಗಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ನಿಮ್ಮ ಆಯ್ಕೆಯಾಗಲಿ.
ಹೌದು… ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯ ಕುಮದ್ವತಿ ಪಿಯು ಕಾಲೇಜು ಗುಣಮಟ್ಟದ ಶಿಕ್ಷಣದಲ್ಲಿ ಹೆಸರುವಾಸಿಯಾಗಿದೆ.
ಭಾರತೀಯ ಟ್ರಸ್ಟ್ ಆಕ್ಟ್ ಅಡಿಯಲ್ಲಿ ನೋಂದಾಯಿಸಲಾದ ಸ್ವಯಂಸೇವಾ ಸಂಸ್ಥೆಯಾಗಿದೆ. ಎಸ್’ವಿವಿಎಸ್ ಶಿಕಾರಿಪುರದಲ್ಲಿ ತನ್ನ ಮುಖ್ಯ ಕಛೇರಿಯನ್ನು ಹೊಂದಿದ್ದು, ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಹಾಗೂ ಸಮಾಜಮುಖಿ ಸೇವೆಯಲ್ಲಿಯೂ ತೊಡಗಿಸಿಕೊಂಡಿದೆ.
2005 ರಲ್ಲಿ ಸ್ಥಾಪನೆಯಾದ ಕಾಲೇಜು ಅತ್ಯುತ್ತಮ ಫಲಿತಾಂಶದ ದಾಖಲೆಯನ್ನು ಉಳಿಸಿಕೊಂಡಿದೆ. ಇಂದಿಗೆ 18 ವರ್ಷವನ್ನು ಪೂರೈಸಿದೆ.
ಕಾಲೇಜಿನಲ್ಲಿ ಏನೆಲ್ಲಾ ಸೌಲಭ್ಯಗಳಿವೆ?
- ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ ಪರಿಸರ ಸ್ನೇಹಿ ಕ್ಯಾಂಪಸ್
- ಸಮಗ್ರ ಮತ್ತು ವಿವರವಾದ ಸಿಇಟಿ, ನೀಟ್, ಜೆಇಇ ಕೋಚಿಂಗ್ ತರಗತಿಗಳು
- ಸುಸಜ್ಜಿತ ಆಧುನಿಕ ಪ್ರಯೋಗಾಲಯಗಳು
- ಹುಡುಗ-ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ
- ಹಾಸ್ಟೆಲ್’ನಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ
- ಸೇವಾ ಮನೋಭಾವದ ಅಧ್ಯಾಪಕ ವೃಂದ
ನೀಟ್ ಸಾಧಕರು ಮಾರ್ಚ್ 2023
- ಎಸ್. ಮಾಲ್ತೇಶ್, ಎಸ್.ಡಿ. ಕಲ್ಲೇಶ್, ಕೆ.ಪಿ. ಯುವರಾಜ್, ಕೆ. ಭೂಮಿಕಾ
- 2023-24ರ ಪಿಯುಸಿ ರಾಂಕ್ ವಿಜೇತರು:
- ಎಂ.ಎಸ್. ಪವನ್, ವಾಣಿಜ್ಯ ವಿಭಾಗ-ರಾಜ್ಯಕ್ಕೆ 2ನೇ ರಾಂಕ್
- ಆರ್. ಸೃಜನಾ, ವಾಣಿಜ್ಯ ವಿಭಾಗ-ರಾಜ್ಯಕ್ಕೆ 5ನೇ ರಾಂಕ್
- ದೀಕ್ಷಿತಾ, ವಿಜ್ಞಾನ ವಿಭಾಗ -ರಾಜ್ಯಕ್ಕೆ 9ನೇ ರಾಂಕ್
ಪ್ರವೇಶ ಪ್ರಾರಂಭವಾಗಿದೆ
- 2024-25 ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಾರಂಭವಾಗಿದೆ.
- ವಿಜ್ಞಾನ ವಿಭಾಗದಲ್ಲಿ: ಪಿಸಿಎಂಬಿ, ಪಿಸಿಎಂಸಿ
- ವಾಣಿಜ್ಯ ವಿಭಾಗ: ಇಬಿಎಸಿಎಸ್, ಇಬಿಎಎಸ್
- ಕಲಾ ವಿಭಾಗ: ಎಚ್’ಇಪಿಎಸ್
Web address:
- www.svvsedu.in
- Email: kscpuccollege@gmail.com
- ದಾಖಲಾತಿಗೆ ಸಂಪರ್ಕಿಸಿ: ಪ್ರಾಚಾರ್ಯರು, ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು, ಶಿಕಾರಿಪುರ, 9480212022, 9886020309, 9845923440
ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಶಿಕಾರಿಪುರ
ಶಿಕ್ಷಣವೆಂದರೆ ಬೆಳಗ್ಗೆಯಿಂದ ಸಂಜೆಯವರೆಗೆ ಪಾಠ ಮಾಡುವುದು ಮತ್ತು ಓದುವುದು ಮಾತ್ರವಲ್ಲ ಆ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಮೊದಲ ಆದ್ಯತೆ. ಈ ಒಂದು ದೃಷ್ಟಿಕೋನದಿಂದಾಗಿ ಪ್ರತಿ ವರ್ಷ ಪಿಯುಸಿ, ಪ್ರಥಮ ದರ್ಜೆ ಕಾಲೇಜು, ಬಿಇಡಿ ಕಾಲೇಜುಗಳಲ್ಲಿ ರಾಂಕುಗಳು ಬರುತ್ತಿದ್ದು ಸಂಸ್ಥೆಯ ಆಶಯಕ್ಕೆ ಮುನ್ನಡೆ ಬರೆದಂತಿದೆ.
ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರದ ಬದಲಾವಣೆ ಹಾಗೂ ಈ ಭಾಗದ ಗ್ರಾಮೀಣ ಮತ್ತು ನಗರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಬೇಕಾದ ಪೂರಕ ವಾತಾವರಣ ನಿರ್ಮಾಣ ಮಾಡುವುದು ಸಂಸ್ಥೆಯು ಉದ್ದೇಶವಾಗಿದೆ.
ಅಂದರೆ, ಪ್ರತಿ ವಿಭಾಗಗಳಿಗೂ ಪ್ರತ್ಯೇಕ ಕಟ್ಟಡಗಳು, ಆಟದ ಮೈದಾನ, 400 ಮೀಟರ್ ರನ್ನಿಂಗ್ ಟ್ರಾಕ್, ಸ್ವಿಮ್ಮಿಂಗ್ ಒಳಾಂಗಣ ಆಟಗಳು ಗ್ರಂಥಾಲಯಗಳು ಪ್ರಯೋಗಾಲಯಗಳು ಹಾಸ್ಟೆಲ್ ಸೌಲಭ್ಯಗಳು ಇತ್ಯಾದಿಗಳನ್ನು ಶಿಕಾರಿಪುರದ ಹೊರ ವಲಯದಲ್ಲಿ ಸುಂದರ ಹಸಿರು ಪರಿಸರದಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಿದ ಕೀರ್ತಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಗೆ ಸಲ್ಲುತ್ತದೆ.
ಯಾವೆಲ್ಲಾ ಶಿಕ್ಷಣ ಸಂಸ್ಥೆಗಳಿವೆ?
1996 ರಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಪ್ರಾರಂಭಿಸಿ ಅದರ ಅಡಿಯಲ್ಲಿ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಕುಮದ್ವತಿ ಪ್ರೌಢಶಾಲೆ, ನಂತರ ಮೈತ್ರಿ ಹಿರಿಯ ಪ್ರಾಥಮಿಕ ಶಾಲೆ, ಶಿವಮೊಗ್ಗದಲ್ಲಿ ಮೈತ್ರಿ ಶಿಕ್ಷಣ ಮಹಾವಿದ್ಯಾಲಯ, 2005 ರಲ್ಲಿ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು, ಕುಮದ್ವತಿ ಏಪ್ರಿಲ್ ಟ್ರೈನಿಂಗ್ ಸ್ಕೂಲ್, ಕುಮದ್ವತಿ ನರ್ಸಿಂಗ್ ಸ್ಕೂಲ್, ಮತ್ತು ಕಾಲೇಜು, 2010 ರಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕುಮದ್ವತಿ ರೆಸಿಡೆನ್ಸಿಯಲ್ (ಸಿಬಿಎಸ್’ಈ, ಎಲ್’ಕೆಜಿಯಿಂದ ಗ್ರೇಡ್ 10 ವರೆಗೆ) ಶಾಲೆಯನ್ನು ಪ್ರಾರಂಭಿಸಲಾಗಿದೆ.
ರಿಯಾಯ್ತಿ ಶಿಕ್ಷಣ ಶುಲ್ಕ
ಇಂದು ಈ ಸಂಸ್ಥೆಯಲ್ಲಿ 2500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕಡಿಮೆ ಶುಲ್ಕ, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ಆರ್ಥಿಕವಾಗಿ ಹಿಂದುಳಿದ ಅನೇಕ ಪ್ರತಿಭಾವಂತರಿಗೆ ಉಚಿತ ಶಿಕ್ಷಣ, ಶುಲ್ಕ ವಿನಾಯಿತಿ ನೀಡಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಿಯು ವಿದ್ಯಾರ್ಥಿಗಳಿಗೆ, ಸಿಇಟಿ, ನೀಟ್, ಜೆಇಇ, ಸಿಎ, ಸಿಎಸ್ ಇತ್ಯಾದಿ ಪದವಿ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಸಿಎ, ಬಿಇಡಿ ವಿದ್ಯಾರ್ಥಿಗಳಿಗೆ ಟಿಇಟಿ, ಸಿಇಟಿ, ಎಫ್’ಡಿಸಿ ಇತ್ಯಾದಿ ಪರೀಕ್ಷೆಗಳಿಗೆ ತಯಾರಿ ಮಾಡಲಾಗುತ್ತಿದೆ.
ಶಿವಮೊಗ್ಗ ಬೆಂಗಳೂರು ಹಾಸನ ಮುಂತಾದ ಕಡೆಯ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಅವರಿಂದ ವಿಶೇಷ ತರಗತಿಗಳನ್ನು ನಡೆಸುವುದು ಸಂಸ್ಥೆಯ ವಿಶೇಷವಾಗಿದೆ.
ಇದರೊಂದಿಗೆ ಓರಿಯಂಟೇಶನ್ ಪ್ರೋಗ್ರಾಂಗಳನ್ನು ನಡೆಸಿ, ಮಾನಸಿಕ ಸ್ಥಿಮಿತಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್’ಗಳನ್ನು ಕೂಡ ನಡೆಸಲಾಗುತ್ತಿದೆ.
ಪಠ್ಯೇತರ ಚಟುವಟಿಕೆಗೂ ಆದ್ಯತೆ
ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಲು ಯೋಗ, ಧ್ಯಾನ, ಜಾಗಿಂಗ್, ಸ್ವಿಮ್ಮಿಂಗ್ ಜೊತೆಗೆ ಅಥ್ಲೆಟಿಕ್, ಬಾಸ್ಕೇಟ್ ಬಾಲ್, ನೆಟ್ ಬಾಲ್, ಬ್ಯಾಡ್ಮಿಂಟನ್, ಲಾನ್ ಟೆನ್ನಿಸ್, ಟೇಬಲ್ ಟೆನ್ನಿಸ್, ಶೆಟ್ಟಲ್ ಬ್ಯಾಡ್ಮಿಂಟನ್ ಇತ್ಯಾದಿ ವಿಭಿನ್ನ ಆಟೋಟಗಳನ್ನು ಕೂಡ ವಿದ್ಯಾರ್ಥಿಗಳಿಗೆ ಮೈಗೂಡಿಸಲಾಗುತ್ತದೆ.
ಉತ್ತಮ ಗುಣಮಟ್ಟದ ವಸತಿ ನಿಲಯವನ್ನು ವಿಶೇಷ ಕಾಳಜಿಯಿಂದ ನಡೆಸಲಾಗುತ್ತಿದೆ. ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದೆ.
ಅತ್ಯಂತ ಗುಣಮಟ್ಟದ ಈ ಸುಂದರ ಹಸಿರು ಪರಿಸರದ ಭವ್ಯ ಕಟ್ಟಡದ ಜೊತೆಗೆ ಅತ್ಯುನ್ನತ ಪದವಿ ಪಡೆದ ಸೇವಾ ಮನೋಭಾವದ ಅಧ್ಯಾಪಕ ವೃಂದವನ್ನು ಹಾಗೂ ಸಿಬ್ಬಂದಿಯನ್ನು ಹೊಂದಿದೆ. ಪ್ರತಿಯೊಂದು ಹಂತದಲ್ಲೂ ಆಡಳಿತ ಮಂಡಳಿಯ ಸಲಹೆ ಸೂಚನೆಗಳನ್ನು ಸಿಬ್ಬಂದಿ ವರ್ಗಕ್ಕೆ ನೀಡುತ್ತಿದ್ದು, ಅದನ್ನು ಚಾಚು ತಪ್ಪದೇ ಪಾಲಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post