ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಬಿ.ಎಸ್. ಯಡಿಯೂರಪ್ಪ ಅವರಂತಹ ಬಿಜೆಪಿಯಲ್ಲಿ ಸಮರ್ಥ ನಾಯಕರು ಇದ್ದರೆ ತೋರಿಸಿ ಎಂದು ಎಂಎಸ್’ಐಎಲ್ ಅಧ್ಯಕ್ಷ, ಶಾಸಕ ಹರತಾಳು ಹಾಲಪ್ಪ ಸವಾಲು ಹಾಕಿದ್ದಾರೆ.
ಶಿಕಾರಿಪುರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ನೂತನ ಸದಸ್ಯರಿಗೆ ಅಭಿನಂದನೆ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಮಾನ ರಾಜಕಾರಣಿ ಯಾರಿದ್ದಾರೆ ತೋರಿಸಿ ಎಂದು ಸಿಎಂ ಬದಲಾವಣೆ ಕುರಿತು ಮಾತನಾಡುವವರಿಗೆ ಸವಾಲು ಎಸೆದರು.
ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗಿನಿಂದಲೂ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬರುತ್ತಿದೆ. ಅದರೆ ಅವರಂತಹ ಸಮರ್ಥ ನಾಯಕರು ನಮ್ಮ ಪಕ್ಷದಲ್ಲಿ ಯಾರಿದ್ದಾರೆ ತಿಳಿಸಿ ಎಂದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಮಹಾ ನಾಯಕ ಬಿಎಸ್.ವೈ. ಅವರು ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಸವೆಸಿದ್ದಾರೆ. ಇಂತಹ ನಾಯಕರ ಬದಲಾವಣೆ ಕುರಿತು ಪಕ್ಷದ ಕೆಲವರು ಮಾತನಾಡುತ್ತಿರುವುದು ಬೇಸರದ ಸಂಗತಿ. ಆದರೆ, ಇಂದಿನ ಪತ್ರಿಕೆಗಳನ್ನು ನೋಡಿದ ನಂತರ ಸಮಾಧಾನವಾಯಿತು. ಎಲ್ಲಾ ರೀತಿಯ ಊಹಾಪೋಹಗಳಿಗೂ ಹೈಕಮಾಂಡ್ ತೆರೆ ಎಳೆದಿದ್ದು, ಬಿಎಸ್’ವೈ ಅವರೇ ಪೂರ್ಣ ಅವಧಿಗೆ ಮುಗಿಯುವವರೆಗೂ ಮುಂದುವರೆಯಲ್ಲಿದ್ದಾರೆ ಎಂದರು.
ಗೋ ಹತ್ಯೆ ನಿಷೇಧ ಪರಿಣಾಮ ಗೋ ತಾಯಿಯ ಆರ್ಶೀವಾದದಿಂದ ಅವರ ಸ್ಥಾನ ಭದ್ರವಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post