ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಒಬ್ಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯವಾದ ಸಾಧನೆ ಮಾಡುವುದು ನಿರ್ದಿಷ್ಟವಾದ ಶ್ರಮ, ಛಲದಿಂದ ಒಳ್ಳೆಯ ವಿದ್ಯಾರ್ಥಿ ಒಳ್ಳೆಯ ವ್ಯಕ್ತಿಯಾಗಿ ಚಟುವಟಿಕೆಗಳಲ್ಲಿ ತೊಡಗಿದಾಗ ಸುಲಭವಾಗಿ ಯಶಸ್ಸು ಕಾಣಲು ಸಾಧ್ಯ ಎಂದು ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಸಿದ್ದಲಿಂಗ ಮೂರ್ತಿ ಅಭಿಪ್ರಾಯಪಟ್ಟರು.
ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ #KumadvathiSchool ಸಭಾಂಗಣದಲ್ಲಿ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿದ್ಯಾರ್ಥಿಗಳಿಗೆ ನಡೆದ ಬೀಳ್ಕೊಡುಗೆ ಸಮಾರಂಭ ಹಾಗೂ ಸರಸ್ವತಿ ಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾರು ಬದುಕಿನಲ್ಲಿ ಕಷ್ಟಗಳನ್ನು ಎದುರಿಸುವ ಜೊತೆಗೆ ಕಷ್ಟವನ್ನು ನುಂಗುತ್ತಾರೋ ಮುಂದೆ ಅವರು ಜೀವನದಲ್ಲಿ ದೊಡ್ಡ ಮಹಾತ್ಮರಾಗುತ್ತಾರೆ. ಶಿಕ್ಷಣ, ಸಂಗೀತ, ಜ್ಞಾದ ಕ್ಷೇತ್ರಗಳಲ್ಲಿ ಭಗವಂತನ ಸ್ಮರಣೆ ಮಾಡುವುದು ನಮ್ಮ ಕಾಯಕಕ್ಕೆ ಉತ್ತಮ ಫಲಿತಾಂಶ ಬರಲೆಂದು. ಅದರ ಜೊತೆಗೆ ವಿದ್ಯಾರ್ಥಿಗಳು ಶಿಸ್ತು ಸಂಯಮದಿಂದ ಪೋಷಕರ ಮತ್ತು ಶಿಕ್ಷಕರ ಮರ್ಗರ್ಶನದಿಂದ ವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡು ಒಬ್ಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯವಾದ ಸಾಧನೆ ಮಾಡುವುದು ನಿರ್ದಿಷ್ಟವಾದ ಶ್ರಮದಿಂದ, ಛಲದಿಂದ ಒಳ್ಳೆಯ ವಿದ್ಯಾರ್ಥಿ ಒಳ್ಳೆಯ ವ್ಯಕ್ತಿಯಾಗಿ ಚಟುವಟಿಕೆಗಳಲ್ಲಿ ತೊಡಗಿದಾಗ ಸುಲಭವಾಗಿ ಯಶಸ್ಸು ಕಾಣಲು ಸಾಧ್ಯ ಎಂದು ಮಕ್ಕಳಿಗೆ ಶುಭ ಹಾರೈಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಡಳಿತ ಪ್ರತಿನಿಧಿಗಳು ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಿ.ಎಸ್. ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಬದುಕಿಗೆ ಸಾಧಕರ ಅನುಭವ ವಿದ್ಯರ್ಥಿ ಜೀವನಕ್ಕೆ ದಾರಿ ದೀಪ ಧನಾತ್ಮಕ ಚಿಂತನೆಗಳಿಂದ ಬದುಕಿನಲ್ಲಿ ಸುಲಭವಾಗಿ ಯಶಸ್ಸು ಕಾಣಲು ಸಾಧ್ಯಎಂದರು.
ಜೀವನದಲ್ಲಿ ಸ್ವರ್ಗ ನರಕ ಇರುವುದು ಭೂಮಿಯ ಮೇಲೆ. ಅದನ್ನು ಅನುಭವಿಸಿದಾಗ ಜೀವನ ಅರ್ಥವಾಗಲು ಸಾಧ್ಯ. ವಿದ್ಯಾರ್ಥಿ ಯಶಸ್ಸನ್ನು ಕಾಣುವರು ಪೋಷಕರು ಮತ್ತು ಶಿಕ್ಷಕರು. ಆದ್ದರಿಂದ ವಿದ್ಯಾರ್ಥಿಗಳು ರಾತ್ರಿ ಕನಸು ಕಾಣದೆ ಹಗಲು ಹಗಲುಗನಸು ಕಾಣುವುದರ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಎಚ್. ವಿಶ್ವನಾಥ್ ಮಾತನಾಡಿ, ಮಕ್ಕಳಿಗೆ ದೈವ ಮತ್ತು ಗುರುವಿನ ಮಹತ್ವದ ಹಾಡನ್ನು ಹಾಡುವುದರ ಮುಖಾಂತರ ಎಲ್ಲರೂ ಮಾಡಿದ ಹಾಗೆ ಮಾಡಿದರೆ ಯಶಸ್ಸು ಕಾಣಲು ಸಾಧ್ಯವಿಲ್ಲ. ಸ್ವಲ್ಪ ಭಿನ್ನವಾಗಿ ಕೆಲಸ ಮಾಡಿದರೆ ಯಶಸ್ಸು ಸಾಧಿಸಲು ಸಾಧ್ಯ. ಪರೀಕ್ಷೆಯಲ್ಲಿ ಅಂಕಗಳು ಮಾತ್ರ ಸೀಮಿತವಲ್ಲ. ನಮ್ಮಲ್ಲಿ ಸಚ್ಚಾರಿತ್ರ ಗುಣಗಳು ದಾರಿದೀಪವಾಗುತ್ತದೆ. ವ್ಯಕ್ತಿಯ ವ್ಯಕ್ತಿತ್ವ ಬದಲಾಗುವ ಜೊತೆಯಲ್ಲಿ ಅರಳುವ ಪುಷ್ಪದಂತೆ ಎಂದು ಮಕ್ಕಳಿಗೆ ತಿಳಿಸಿದರು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಚ್.ವೈ. ಗಣೇಶ್, ಎಂ.ಬಿ. ವರ್ಷ, ಬಿ.ಆರ್. ಮೇಘನಾ, ಕೆ.ಬಿ. ಅಮಿತ್, ಮೆಹನಾಜ್ ಕುರೇಶಿ ಮಾತನಾಡಿ ಕಾಲೇಜಿನ ದಿನಗಳನ್ನು ಮೆಲುಕು ಹಾಕಿದನು. ನಂತರ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ನೆನಪಿನ ಕಾಣಿಕೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ. ವೀರೇಂದ್ರ ಮಾತನಾಡಿ, ಜೀವನದಲ್ಲಿ ಕಷ್ಟ ಸುಖ, ಸೋಲು ಗೆಲುವು, ಕತ್ತಲು ಬೆಳಕು, ಹಗಲು ರಾತ್ರಿ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ಒಳ್ಳೆಯ ಸಚ್ಚಾರಿತ್ರ, ವ್ಯಕ್ತಿತ್ವ ಬೆಳೆಸಿಕೊಳ್ಳವುದರ ಜೊತೆಗೆ ಪರೀಕ್ಷೆಗಳನ್ನು ಹಬ್ಬದಂತೆ ಎದುರಿಸಬೇಕು ಎಂದು ಶುಭ ಹಾರೈಸಿದರು.
ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿಗಳಾದ ಬಿ.ಆರ್. ಮೇಘನಾ, ಎಂ.ಬಿ. ವರ್ಷ ಹಾಗೂ ಹಾಗೂ ದೈಹಿಕ ನ್ಯೂನ್ಯತೆಯಿಂದ ಕೂಡಿದ ವಿದ್ಯಾರ್ಥಿಗೆ ಕಾಲೇಜಿನ ಎಕ್ಸಲೆಂಟ್ ಅವಾರ್ಡ್ ನೀಡಲಾಯಿತು.
ನಿವೃತ್ತ ಪಾಚಾರ್ಯ ಡಾ. ಸಿದ್ದಲಿಂಗಮೂರ್ತಿ ಅವರಿಗೆ ನೆನಪಿನ ಕಾಣಿಕೆ ಮತ್ತು ಗೌರವ ಸಮರ್ಪಣೆ ನೀಡಿ ಗೌರವಿಸಲಾಯಿತು. ಪರ್ವಿಜ್ ಅಹಮದ್ ಮಾತನಾಡಿದರು.
ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಗೇಮ್ಸ್, ಡಾನ್ಸ’ಗಳಲ್ಲಿ ತೊಡಗಿಸುವುದರ ಮೂಲಕ ರಂಜಿಸಿದರು.
ಅನುಷ್ಕಾ ನಾಡಿಗ್ ಸಂಗಡಿಗರು ಪ್ರಾರ್ಥಿಸಿ, ಜಿ.ಎಂ. ಪ್ರಿಯಾಂಕ, ಲಕ್ಷ್ಮೀ ವಿ. ವಂದಿಸಿ, ದಿವ್ಯಾ ಪ್ರಭು ಮತ್ತು ಪೈಜಾ ಕೌನನ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















