ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಲೆನಾಡು ಕಂಡ ಸೃಜನಶೀಲ ಕಲಾವಿದ, ಕಲಾ ನಿರ್ದೇಶಕ ಎಚ್. ಮಂಜು ಅವರ ನೆನಪಿನಲ್ಲಿ ಡಿಸೆಂಬರ್ 5 ಹಾಗೂ 6ರಂದು ನಾಟಕೋತ್ಸವವನ್ನು ಆಯೋಜನೆ ಮಾಡಲಾಗಿದೆ.
ಮುತ್ಸದ್ಧಿ ರಾಜಕಾರಣಿ, ಮಾಜಿ ಉಪಮುಖ್ಯಮಂತ್ರಿ, ರಂಗಭೂಮಿ ಕಲಾವಿದ ಎಂ.ಪಿ. ಪ್ರಕಾಶ್ ಅವರು ಹುಟ್ಟುಹಾಕಿದ ಹೂವಿನ ಹಡಗಲಿಯ ರಂಗಭಾರತಿ ರೆಪರ್ಟರಿ ನಾಟಕಗಳು ಇದಾಗಿದ್ದು, ಎರಡೂ ದಿನ ಸಂಜೆ 7 ಗಂಟೆಗೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.
ಮಂಜು ಅವರು ನಮ್ ಟೀಮ್ ತಂಡದ ಹಲವು ನಾಟಕಗಳಿಗೆ ಕಲಾ ನಿರ್ದೇಶನ ಮಾಡಿದ್ದರು. ಇದೇ ವರ್ಷ ಡಿಸೆಂಬರ್’ಗೆ ಅವರು ನಿಧನರಾಗಿ 16 ವರ್ಷವಾಗುತ್ತದೆ. ಅವರ ಸ್ಮರಣೆಯಲ್ಲಿ ಈ ನಾಟಕೋತ್ಸವ ಆಯೋಜಿಸಲಾಗಿದೆ.
ನಾಟಕೋತ್ಸವದಲ್ಲಿ ರಂ.ಶಾ. ಲೋಕಾಪೂರ ಅವರು ರಚಿಸಿರುವ ಸಂಕಾನಟ್ಟಿ ಚಂದ್ರಿ ನಾಟಕವು ಮಹದೇವ ಹಡಪದ ನಟುವರ ಅವರ ನಿರ್ದೇಶನದಲ್ಲಿ ಮತ್ತು ಪ್ರಸನ್ನ ಅವರು ರಚಿಸಿರುವ ಒಂದು ಲೋಕದ ಕಥೆ ನಾಟಕವು ಅಪೂರ್ವ ಆನಗಳ್ಳಿ ಅವರ ನಿರ್ದೇಶನದಲ್ಲಿ ಪ್ರದರ್ಶನವಾಗಲಿದೆ.
Get in Touch With Us info@kalpa.news Whatsapp: 9481252093
Discussion about this post