ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘದ ಸದಸ್ಯರ ಸಾಲದ ಮೊಬಲಗನ್ನು ಖಜಾನೆ-2ರಲ್ಲಿ ಕಡಿತಗೊಳಿಸಲು ಎಚ್.ಆರ್.ಎಂ.ಎಸ್.ನಲ್ಲಿ ಅಳವಡಿಸಿಕೊಡುವಂತೆ ಆಗ್ರಹಿಸಿ ಅನುದಾನಿತ ನೌಕರರ ಸಹಕಾರ ಸಂಘದ ಅಧ್ಯಕ್ಷ ಯೋಗೇಶ ಅವರ ನೇತೃತ್ವದ ನಿಯೋಗ ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಈ ಮೊದಲು ಸಹಕಾರ ಸಂಘದಿಂದ ತೆಗೆದುಕೊಂಡ ಸಾಲಗಳ ಕಂತನ್ನು ಎಚ್.ಆರ್.ಎಂ.ಎಸ್.ಮೂಲಕ ಪ್ರತಿ ತಿಂಗಳೂ ಕಟಾಯಿಸುವ ಸೌಲಭ್ಯ ಇತ್ತು. ಖಜಾನೆ-2 ವ್ಯವಸ್ಥೆ ಬಂದಾಗಿನಿಂಗ ಸಾಲಗಳ ಕಂತನ್ನು ಕಟಾಯಿಸುವ ಸೌಲಭ್ಯ ಇಲ್ಲವಾಗಿದೆ. ಆ ಕಾರಣಕ್ಕೆ ಸಹಕಾರ ಸಂಘದಲ್ಲಿ ಸುಸ್ತಿದಾರರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

Also read: ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಉದ್ದೇಶ, ಪ್ರಯೋಜನವೇನು ಗೊತ್ತಾ? ಇಲ್ಲಿದೆ ಮಾಹಿತಿ
ಈ ನಿಟ್ಟಿನಲ್ಲಿ ತಕ್ಷಣ ಕಾರ್ಯೋನ್ಮುಖರಾಗಿ ಅನುದಾನಿತರ ಸಹಕಾರ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.












Discussion about this post