ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಲಷ್ಕರ್ ಮೊಹಲ್ಲಾದಲ್ಲಿ ನಿನ್ನೆ ಸಂಜೆ ನಡೆದ ಡಬಲ್ ಮರ್ಡರ್ #DoubleMurder ಪ್ರಕರಣದ ಗ್ಯಾಂಗ್ ವಾರ್’ನಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರೌಡಿ ಶೀಟರ್ ಯಾಸಿನ್ ಖುರೇಷಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ನಿನ್ನೆ ಸಂಜೆ ನಗರದ ಲಷ್ಕರ್ ಮೊಹಲ್ಲಾದಲ್ಲಿ ನಡೆದ ದಾಳಿ ವೇಳೆ ನಿನ್ನೆ ನಡೆದಿದ್ದ ಗ್ಯಾಂಗ್ ವಾರ್’ನಲ್ಲಿ #GangWar ಶೋಯೇಬ್ ಯಾನೆ ಸೆಬು ಮತ್ತು ಗೌಸ್ ಮೃತಪಟ್ಟಿದ್ದರು.
ಘಟನೆಯಲ್ಲಿ ಯಾಸಿನ್ ಖುರೇಷಿ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಆತ ಕೊನೆಯುಸಿರೆಳೆದಿದ್ದಾನೆ.
ಚಿಕಿತ್ಸೆ ಫಲಕಾರಿಯಾಗದೆ ಖುರೇಶಿಯ ಸಾವಾಗಿದೆ. ಆತನಿಗೂ ಮತ್ತು ಆದಿಲ್ ಎಂಬಾತನ ನಡುವೆ ಗಲಾಟೆಯಾಗಿರುವುದಾಗಿ ತಿಳಿದು ಬಂದರೂ ಸಹ ಯಾವ ವಿಷಯಕ್ಕೆ ಗಲಾಟೆ ಎಂಬುದು ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.
ಯಾಸಿನ್ ಖುರೇಷಿ ಮೇಲೆ ಆದಿಲ್ ಮತ್ತು ಆತನ ಸಹಚರರು ದಾಳಿ ನಡೆಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















Discussion about this post