ಶಿವಮೊಗ್ಗ: ಶೀಘ್ರದಲ್ಲೆ ಮಲೇಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಶಿವಮೊಗ್ಗದ ಹಿರಿಯ ಮಹಿಳಾ ಕ್ರೀಡಾಪಟು ಅನಿತಾ ಅವರನ್ನು ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್’ಟೈಲ್ಸ್ ವತಿಯಿಂದ ಸನ್ಮಾನಿಸಲಾಯಿತು.
ತಮ್ಮ ಮಳಿಗೆಗೆ ಆಹ್ವಾನಿಸಿದ್ದ ಹಿರಿಯ ಕ್ರೀಡಾಪಟು 61 ವರ್ಷದ ಅನಿತಾ ಅವರನ್ನು ಸಂಸ್ಥೆಯ ಹಿರಿಯರು ಆತ್ಮೀಯವಾಗಿ ಅಭಿನಂದಿಸಿದರು.
ಅನಿತಾ ಅವರು, ಇತ್ತೀಚೆಗೆ ನಡೆದ 39ನೆಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಯುವಜನರನ್ನು ನಾಚಿಸುವಂತೆ ಪ್ರದರ್ಶನ ನೀಡಿ 400 ಮೀಟರ್ ರಿಲೇಯಲ್ಲಿ 3ನೆಯ ಸ್ಥಾನ ಪಡೆದು ಮಲೇಷ್ಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

















