ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಂದೆಡೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ತಪಾಸಣೆ ಒಂದೆಡೆ ಜೋರಾಗಿದ್ದರೆ, ಇನ್ನೊಂದೆಡೆ ಟ್ರಾಫಿಕ್ ಪೊಲೀಸರು #TrafficPolice ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಬೈಕ್ ಮಾಲೀಕನೊಬ್ಬ ತನ್ನ ದ್ವಿಚಕ್ರ ವಾಹನಕ್ಕೆ ಕರ್ಕಶ ಸೈಲೆನ್ಸರ್ #DefectiveSilencer ಅಳವಡಿಸಿದ್ದ ಪರಿಣಾಮ ಆತನಿಗೆ 8000 ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
ಮೇಘರಾಜ್ ಎಂಬ ವ್ಯಕ್ತಿ ತನ್ನ ಬೈಕಿಗೆ ಒರಿಜಿನಲ್ ಬದಲಾಗಿ ಕರ್ಕಶವಾದ ಸೈಲೆನ್ಸರ್ ಅಳವಡಿಸಿಕೊಂಡಿದ್ದನು. ಇದರಿಂದ ಉಂಟಾಗಿದ್ದ ಕರ್ಕಶ ಶಬ್ದ ಕಿರಿಕಿರಿ ಉಂಟಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಈತನ ಬೈಕ್ ನಂಬರ್ ಉಲ್ಲೇಖಿಸಿ ದೂರು ನೀಡಿದ್ದರು.
Also read: ಕೂಡಲಿ ತುಂಗಭದ್ರಾ ಸಂಗಮದಲ್ಲಿ ಈಜಲು ಹೋದ ಯುವಕ ನೀರಲ್ಲಿ ಮುಳುಗಿ ಸಾವು
ಈ ಹಿನ್ನೆಲೆಯಲ್ಲಿ ಡಿಫೆಕ್ಟಿವ್ ಸೈಲೆನ್ಸರ್ ಅಳವಡಿಸಿಕೊಂಡ ಪರಿಣಾಮ ಆತನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬೈಕ್ ಮಾಲಿಕನಿಗೆ ನ್ಯಾಯಾಲಯ ರೂ.8000 ದಂಡ ವಿಧಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















