ಶಿವಮೊಗ್ಗ: ಶ್ರೀವಿಜಯ ಕಲಾನಿಕೇತನದ ವತಿಯಿಂದ ಜೂನ್ 29ರ ಶನಿವಾರ ಸಂಜೆ 6 ಗಂಟೆಗೆ ವಿಶೇಷ ಕಥಕ್ ನೃತ್ಯ ಹಾಗೂ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ನೃತ್ಯ ನೀರಾಜನ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರಿನ ಕಲಾದರಾದ ವಿದ್ವಾನ್ ಲಕ್ಷ್ಮೀ ನಾರಾಯಣ್ ಜಿನಾ ಅವರಿಂದ ಕಥಕ್ ನೃತ್ಯ ಕಾರ್ಯಕ್ರಮ ಹಾಗೂ ವಿದೂಷಿ ಸ್ನೇಹಾ ನಾರಾಯಣ್ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಪೇಸ್ ವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ. ಶಂಕರ ನಾರಾಯಣ ಶಾಸ್ತ್ರಿ, ಶ್ರೀವಿಜಯದ ಅಧ್ಯಕ್ಷ ಡಾ.ಕೆ.ಆರ್. ಶ್ರೀಧರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
Discussion about this post