ಶಿವಮೊಗ್ಗ: ಸುಮಾರು 10 ವರ್ಷಗಳ ನಂತರ ಜಿಲ್ಲಾಡಳಿತದ ವತಿಯಿಂದ ಆಯೋಜನೆಗೊಂಡಿರುವ ಸಹ್ಯಾದ್ರಿ ಉತ್ಸವ-2019 ಇಡಿಯ ಜಿಲ್ಲೆಗೆ ಒಂದು ಸಂಭ್ರಮವನ್ನು ತಂದಿದೆ. ಈ ಸಂಭ್ರಮದಲ್ಲಿ ಆಕಾಶವಾಣಿಯೂ ಸಹ ಭಾಗಿಯಾಗಲಿದೆ.
ಜ.25 ರಂದು ಬೆಳಗ್ಗೆ 9.35ಕ್ಕೆ ಸಮಾರಂಭದ ಬಾನುಲಿ ವರದಿ ಹಾಗೂ 11.30ಕ್ಕೆ ಉತ್ಸವದ ನೇರ ವರದಿ ಪ್ರಸಾರವನ್ನು ಶ್ರೋತೃಗಳಿಗಾಗಿ ಆಕಾಶವಾಣಿ ನೀಡಲಿದೆ.
ಅದೇ ರೀತಿ, ಜ.28ರಂದು ಬೆಳಗ್ಗೆ 9.15ಕ್ಕೆ ಉತ್ಸವದ ಸಮಾರೋಪ ಸಮಾರಂಭದ ನೇರ ಬಾನುಲಿ ವರದಿಯನ್ನು ಆಕಾಶವಾಣಿ ನೀಡಲಿದೆ.
ಆಸಕ್ತ ಶ್ರೋತೃಗಳು ಸಂಪೂರ್ಣ ವರದಿಯನ್ನು ಆಲಿಸಬಹುದು ಎಂದು ಆಕಾಶವಾಣಿ ತಿಳಿಸಿದೆ.

















