ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗ್ರಾಮ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರನ್ನು ಒಗ್ಗೂಡಿಸುವ ಜೊತೆಯಲ್ಲಿ ಚುರುಕಾಗಿ ಕಾರ್ಯ ನಿರ್ವಹಿಸುವಂತೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಕಾರ್ಯಕಾರಿಣಿಯ ಮೊದಲ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಹೇಗೆ ಈ ಚುನಾವಣೆಯಲ್ಲಿ ಒಗ್ಗೂಡಿಸಬೇಕು ಎನ್ನುವುದನ್ನು ತಿಳಿಸುವ ಜೊತೆಗೆ ವಾರ್ ರೂಮ್ ತಯಾರಿ ಬಗ್ಗೆ ತಿಳಿಸಿದರು.
ಶಿವಮೊಗ್ಗ ಗ್ರಾಮಾಂತರ ಕಾರ್ಯಕಾರಿಣಿ ಸಮಿತಿ ಅಧ್ಯಕ್ಷ ರತ್ನಾಕರ ಶೆಣೈ ಮಾತನಾಡಿ, ಬಿಜೆಪಿಗೆ ಇರುವ ಸಾಮಾಜಿಕ ಬದ್ದತೆಯನ್ನು ನೆನೆಯುತ್ತ ಕೊವಿಡ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು. ಕೊರೋನದಿಂದ ಆರ್ಥಿಕವಾಗಿ ಹೊಡೆತ ಜನರಿಗೆ ಬಿದ್ದಿರುವ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಸಹಕಾರ ಸಿಕ್ಕಿದೆ ಎಂದು ತಿಳಿಸಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಂದಿನ ಗ್ರಾಮ ಪಂಚಾಯತಿಯಲ್ಲಿ ಎಂತಹ ಅಭ್ಯರ್ಥಿಗಳನ್ನು ನಾವು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಗ್ರಾಮಾಂತರ ಪ್ರಭಾರಿ ಆರ್.ಟಿ. ಗೋಪಾಲ್, ಸಹಪ್ರಭಾರಿ ಎಂ. ಮಂಜುನಾಥ್, ಮಾಜಿ ಗ್ರಾಮಾಂತರ ಅಧ್ಯಕ್ಷರಾದ ವಿರೂಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಸ್. ಗೋಪಾಲ್ ಹಾಗೂ ಡಿ.ಎಂ. ಗಿರೀಶ್, ತಾಲೂಕು ಪಂಚಾಯತಿ ಸದಸ್ಯೆ ಗೀತಾ ಜೈ ಶೇಖರ್, ಜಿಲ್ಲಾಪಂಚಾಯತ್ ಸದಸ್ಯೆ ಸೌಮ್ಯ ಭೋಜಾನಾಯ್ಕ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post