ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಕುಂಸಿ ಉಪವಿಭಾಗದ ಶ್ರೀರಾಂಪುರ ಶಾಖಾ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿಯ ಪ್ರಗತಿಯಲ್ಲಿರುವುದರಿಂದ ಆಲ್ಕೋಳ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎ.ಎಫ್-13, ಎ.ಎಫ್-19 ಮತ್ತು ಎ.ಎಫ್-12 ಮಾರ್ಗಗಳ ವ್ಯಾಪ್ತಿಯಲ್ಲಿ ಬರುವ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿಲಿದೆ.

ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ ಬೋವಿಕಾಲೋನಿ, ಅಂಬೇಡ್ಕರ್ ನಗರ, ಭೈರನಕೊಪ್ಪ, ಹನುಮಂತ ನಗರ, ವೆರ್ಟನರಿ ಕಾಲೇಜ್, ಕ್ರಷರ್‍ಸ್ ವ್ಯಾಪ್ತಿ, ಆಲ್ಕೋಳ ಎಸ್‌ಎಲ್‌ವಿ ಲೇಔಟ್, ಜೆಹೆಚ್ ಪಾಟೇಲ್ ಬಡಾವಣೆ, ಕೆಎಸ್‌ಆರ್‌ಟಿಸಿ ಲೇಔಟ್, ಸಂಗೋಳ್ಳಿರಾಯಣ್ಣ ಲೇಔಟ್, ನರಸಮ್ಮ ಲೇಔಟ್, ಸಹ್ಯಾದ್ರಿ ನಗರ ಆದರ್ಶನಗರ, ಪುಷ್ಪಗಿರಿ ಲೇಔಟ್, ಸೋಮಿನಕೊಪ್ಪ ವಿಜಯಲಕ್ಷೀ ಲೇಔಟ್, ಎಂ.ಎಂ.ಎಸ್ ಲೇಔಟ್, ಕೆ.ಹೆಚ್.ಬಿ ಲೇಔಟ್, ಮಹಾಲಕ್ಷೀ ಲೇಔಟ್, ಶಿವಸಾಯಿ ಕ್ಯಾಸ್ಟಿಂಗ್ ಪ್ಯಾಕ್ಟರಿ ಹಾಗೂ ಇನ್ನಿತರೆ ಸುತ್ತಮುತ್ತ ಪ್ರದೇಶಗಳ ವ್ಯಾಪ್ತಿಯಲ್ಲಿ ಫೆ.೨೧ರ ನಾಳೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪಾ&ನಿ ಉ.ವಿ.ದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















