ಶಿವಮೊಗ್ಗ: ಮಲೆಶಂಕರ ಗ್ರಾಮದ ಮುಖ್ಯರಸ್ತೆಯಲ್ಲಿ ಅರ್ಜುನ್ ಗುಂಡಿ ಎಂಬ ಕೆರೆಯಿರುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ತರು ಬಸ್ ತಡೆದು ಇಂದು ಪ್ರತಿಭಟನೆ ನಡೆಸಿದರು.
ತಾಲೂಕಿನ ಸಿರಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಈ ಸುಮಾರು 60 ಅಡಿ ಆಳ ಇದ್ದು ಮತ್ತು ಇದರ ಪಕ್ಕದಲ್ಲಿ ದೊಡ್ಡದಾದ ಕಂದಕ ಇದ್ದು ಮದ್ಯದಲ್ಲಿ ಕಿರಿದಾದ ರಸ್ತೆ ಇದೆ ಇದು ತುಂಬಾ ಅಪಾಯಕಾರಿಯಾಗಿದೆ. ಮೂರು ವರ್ಷದ ಹಿಂದೆ ಒಂದು ಲಾರಿ ಬಿದ್ದು ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತ ಪಟ್ಟಿದ್ದು ನಂತರ ಕೆಲವು ತಿಂಗಳ ನಂತರ ಮಾರುತಿ ಓಮಿನಿ ಬಿದ್ದು ಸ್ಥಳದಲ್ಲಿ ಮೂರು ಜನ ಮೃತ ಪಟ್ಟಿದ್ದರು. ಇದು ಕುಂಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದು ಜನ ಪ್ರತಿನಿಧಿಗಳು, ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ಬಂದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಕೆಲವು ತಿಂಗಳಿಂದ ನಮ್ಮ ಊರಿಗೆ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿದೆ ಇದರಲ್ಲಿ ಶಾಲಾ ವಿದ್ಯಾರ್ಥಿಗಳು ನಾಗರಿಕರು ಪ್ರಯಾಣ ಮಾಡುತ್ತಾರೆ. ಪ್ರತಿದಿನ ಸುಮಾರು 30 ರಿಂದ 45 ಜನ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣ ಮಾಡುತ್ತಾರೆ. ಈ ಬಸ್ಸು ಇದೆ ಕೆರೆ ದಂಡೆಯ ಮೇಲೆ ಸಂಚರಿಸುತ್ತದೆ. ಇದು ತುಂಬಾ ಅಪಾಯಕಾರಿಯಾಗಿದ್ದು ಇದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣವೇ ಗಮನ ಹರಿಸಿ ತಡೆ ಗೋಡೆ ನಿರ್ಮಾಣ ಮಾಡಿ ಮುಂದೆ ಆಗುವ ಅಪಘಾತಗಳಿಗೆ ಅವಕಾಶ ಮಾಡಿ ಕೊಡಬಾರದು ಎಂದು ಆಗ್ರಹಿಸಿದರು.
ಒಂದು ವೇಳೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಂ.ಪಿ. ಮಂಜುನಾಥ್, ಕೃಷ್ಣಮೂರ್ತಿ ಬೆಂಕಿ, ಪುಟ್ಟಸ್ವಾಮಿ, ವಸಂತ್ ಕುಮಾರ್, ಪರಮೇಶ್ ರತ್ನಾಕರ್, ರಾಘವೇಂದ್ರ ಮತ್ತು ಗ್ರಾಮಸ್ಥರು ಇದ್ದರು.
Discussion about this post