ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಡಾ.ಧನಂಜಯ ಸರ್ಜಿ #DrDhananjayaSarji ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಬಿಜೆಪಿ #BJP ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವೈದ್ಯಕೀಯ #Medical ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ.ಧನಂಜಯ ಸರ್ಜಿ ಅವರನ್ನು ಕಣಕ್ಕಿಳಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಆರಂಭವಾದ ಬಿಜೆಪಿ-ಜೆಡಿಎಸ್ ಮೈತ್ರಿ ಈ ಚುನಾವಣೆಯಲ್ಲೂ ಸಹ ಮುಂದುವರೆದಿದೆ. ಬಿಜೆಪಿ 5 ಹಾಗೂ ಜೆಡಿಎಸ್ 1 ಕ್ಷೇತ್ರಗಳನ್ನು ಹಂಚಿಕೊಂಡಿದೆ.
ಯಾರು ಎಲ್ಲಿಗೆ?
- ನೈಋತ್ಯ ಪದವೀಧರರ ಕ್ಷೇತ್ರ: ಡಾ.ಧನಂಜಯ ಸರ್ಜಿ
- ಈಶಾನ್ಯ ಪದವೀಧರ ಕ್ಷೇತ್ರ: ಅಮರನಾಥ್ ಪಾಟೀಲ್
- ಬೆಂಗಳೂರು ಪದವೀಧರ ಕ್ಷೇತ್ರ: ಎ. ದೇವೇಗೌಡ
- ಅಗ್ನೇಯ ಶಿಕ್ಷಕರ ಕ್ಷೇತ್ರ: ನಾರಾಯಣ ಸ್ವಾಮಿ
- ದಕ್ಷಿಣ ಶಿಕ್ಷಕರ ಕ್ಷೇತ್ರ: ಇಸಿ ಲಿಂಗರಾಜು
- ನೈರುತ್ಯ ಪದವೀಧರ ಕ್ಷೇತ್ರ(ಜೆಡಿಎಸ್): ಭೋಜೇಗೌಡ
Also read: 75 ಕಡೆ ಝೀರೋ ರಿಸಲ್ಟ್ ಬಂದಿದ್ದರೂ ಬಿಗಿಯಾಗಿ ಪರೀಕ್ಷೆ ನಡೆಸಿದ್ದು ಇದಕ್ಕಾಗಿ: ಶಿಕ್ಷಣ ಸಚಿವರು ಹೇಳಿದ್ದೇನು?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post