ಶಿವಮೊಗ್ಗ: ವಿನೋಬನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿರುವ ಇಂದಿರಾ ಪ್ರಕಾಶ್ ಅಕಾಡೆಮಿ ವತಿಯಿಂದ ಎ.11 ರಿಂದ ಮೇ 5ರವರೆಗೆ ಅಜ್ಜಿ ಮನೆ ಹೆಸರಿನಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಮುಖ್ಯಸ್ಥೆ ಇಂದಿರಾ ಪ್ರಕಾಶ್ ತಿಳಿಸಿದ್ದಾರೆ.
ಇದೊಂದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಶಿಬಿರ ಸಂಪೂರ್ಣವಾಗಿ ಯಶಸ್ವಿಯಾಗಲಿದೆ. ಇಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳು ನೃತ್ಯ, ಏರೋಬಿಕ್ಸ್, ನಾಟಕ, ಚಿತ್ರಕಲೆ, ಸಂಗೀತ, ಸಾಹಿತ್ಯ, ಯೋಗ, ಪ್ರಾಣಯಾಮ, ಮಂತ್ರಘೋಷ ಅಲ್ಲದೇ ಬೇಸಿಕ್ ಕನ್ನಡ, ಇಂಗ್ಲಿಷ್ ಮತ್ತು ಗಣಿತ ತರಗತಿಗಳ ಮಾಹಿತಿ, ಸಂಸ್ಕೃತ ಭಾಷಾ ಕಲಿಕೆ ಇರುತ್ತದೆ ಎಂದರು.
ಇದಲ್ಲದೇ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು, ಸಾಮರಸ್ಯ ಮೂಡಿಸಲು, ಮೌಲ್ಯಗಳನ್ನು ತಿಳಿಸಲು ಸಂಸ್ಕೃತಿ ಜೊತೆಗೆ ಕಥೆ ಹಾಗೂ ಅಜ್ಜಿ ಮನೆಯ ಆಟಗಳು, ಜನಪದ ಕ್ರೀಡೆಗಳು ಸಹ ಹೇಳಿಕೊಡಲಾಗುತ್ತದೆ. ಆಟದ ಜೊತೆಗೆ ಪಾಠ, ಸುಂದರ ನೋಟ ಇವೆಲ್ಲವೂ ಹಳ್ಳಿಯ ವಾತಾವರಣದಂತೆ ಇರುತ್ತದೆ ಎಂದು ತಿಳಿಸಿದ್ದಾರೆ.
ಸ್ಥಳ ಮತ್ತು ಸಮಯ:
ಕಲ್ಲಹಳ್ಳಿಯಲ್ಲಿರುವ ಶಿವಗಂಗಾ ಯೋಗ ಕೇಂದ್ರದ ಪಕ್ಕದ ರಾಯಲ್ ಡೈಮಂಡ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಈ ಶಿಬಿರ ನಡೆಯಲಿದೆ. ಶಿಬಿರದ ಸಮಯ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ಇರುತ್ತದೆ. ಏ.10ರ ಸಂಜೆ 4ಕ್ಕೆ ಪರಿಚಯ ಕಾರ್ಯಕ್ರಮ ಇರುತ್ತದೆ. ಹೆಚ್ಚಿನ ಮಾಹಿತಿಗೆ ಮೊ.ಸಂ. 9591843498, 8310521423, 9900281481ನ್ನು ಸಂಪರ್ಕಿಸಬಹುದಾಗಿದೆ.
Discussion about this post