ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿದಿಗೆಯ ಬಿಎಚ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ #RoadAccident ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ನಿದಿಗೆ ಕೆರೆಯ ಬಳಿಯಲ್ಲಿ ಇಂದು ಮುಂಜಾನೆ ಘಟನೆ ಸಂಭವಿಸಿದೆ. ರೆನಾಲ್ಟ್ ಕಾರು ಹಾಗೂ ವ್ಯಾಗನಾರ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮೇಘರಾಜ್ ಎನ್ನುವವರು ಮರಣವನ್ನಪ್ಪಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ರೋಡ್ ಕ್ರಾಸಿಂಗ್ ಮಾಡಿ ಏಕಮುಖ ಸಂಚಾರ ಮಾಡಲಾಗಿದೆ. ಇದರ ಅರಿವು ದಾರಿಯಲ್ಲಿ ಬರುತ್ತಿರುವ ವಾಹನಗಳಿಗೆ ಗೊತ್ತಾಗುತ್ತಿಲ್ಲ. ಇವತ್ತಿನ ಘಟನೆಗೂ ಇದೇ ಕಾರಣ ಎನ್ನಲಾಗುತ್ತಿದೆ.
ರೆನಾಲ್ಟ್ ಕಾರಿನ ಚಾಲಕ ಇನ್ನೊಂದು ಬದಿಯಲ್ಲಿ ಸಾಗಬೇಕಿತ್ತು. ಒನ್ ವೇನಲ್ಲಿ #Oneway ಬಂದ ಕಾರು ಎದುರಿಗೆ ಬರುತ್ತಿದ್ದ ವ್ಯಾಗನಾರ್’ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ವ್ಯಾಗನಾರ್ ಕಾರು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಗಾಯಾಳುಗಳ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದ್ದು ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್’ನಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – editor@kalpa.news info@kalpa.news









Discussion about this post