ಶಿವಮೊಗ್ಗ: ನಗರದ ಗುರುಪುರದಲ್ಲಿರುವ ದೆಹಲಿ ಇಂಟರ್’ನ್ಯಾಶನಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ವಿಜ್ಞಾನ ಮೇಳ ಹಾಗೂ ಪ್ರದರ್ಶನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಪ್ರತಿಭೆಗೆ ವೇದಿಕೆಯಾಗಿ ಪರಿವರ್ತಿತವಾಗಿತ್ತು.
ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ, ಆರೋಗ್ಯ ಶಿಬಿರದಲ್ಲಿ ಏರೋನಾಟಿಕ್, ರೋಬೋಟಿಕ್, ಲೈವ್ ಸೋಲಾರ್ ಸಿಸ್ಟಂ ಮತ್ತು ಹೆಲ್ತ್ ಕ್ಯಾಂಪ್ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ನಾಡ್ ಇಎನ್’ಟಿ ಕೇಂದ್ರದ ಡಾ. ಶ್ರೀಧರ್ ಎಸ್ ಮಾತನಾಡಿ, ಇಂದಿನ ದಿನಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮಕ್ಕಳಲ್ಲಿ ಉತ್ಸಾಹ ತುಂಬುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ದೆಹಲಿ ಇಂಟರ್’ನ್ಯಾಶನಲ್ ಶಾಲೆಯ ಈ ಪ್ರಯತ್ನ ಶ್ಲಾಘನೀಯ ಎಂದರು.
ಸುಬ್ಬಯ್ಯ ಡೆಂಟಲ್ ಕಾಲೇಜಿನ ಡಾ.ಚೇತನ್ ಜಗದೀಶ್ ಮಾತನಾಡಿ, ಮಕ್ಕಳಿಗೆ ಈಗಿನಿಂದಲೇ ದಂತ ಆರೋಗ್ಯದ ಕುರಿತಾಗಿ ಜಾಗೃತಿ ಮೂಡಿಸಬೇಕು. ಈ ರೀತಿಯ ಕ್ಯಾಂಪ್’ಗಳನ್ನು ಆಯೋಜನೆ ಮಾಡುವುದರಿಂದ ಈ ರೀತಿಯ ಕಷ್ಟದ ಕೆಲಸಗಳು ಸುಲಭವಾಗುತ್ತವೆ ಎಂದರು.
ಶಾಲೆಯ ಫೌಂಡರ್ ಜಗದೀಶ್ ಗೌಡ ಮಾತನಾಡಿ, ಕೆಲಸದ ಒತ್ತಡದ ನಡುವೆಯೂ ಈ ಎಲ್ಲಾ ವೈದ್ಯರುಗಳು ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಿ, ಆರೋಗ್ಯ ಶಿಬಿರ ಯಶಸ್ವಿಯಾಗುವಲ್ಲಿ ಕಾರಣರಾಗಿದ್ದಾರೆ. ಈ ಎಲ್ಲ ವೈದ್ಯರಿಗೆ ಸಂಸ್ಥೆ ಕೃತಜ್ಞತೆ ಅರ್ಪಿಸುತ್ತದೆ ಎಂದರು.
ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ನಮ್ಮ ಶಾಲೆಯ ವತಿಯಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ರೋಬೋಟಿಕ್, ಏರೋನಾಟಿಕ್ ತಯಾರಿಕೆ ಹಾಗೂ ವಿಜ್ಞಾನ ಪ್ರಯೋಗಾಲಯದ ಬಗ್ಗೆ ಈಗಿನಿಂದಲೇ ಪ್ರಸ್ತುತ ಪ್ರಡಿಸುತ್ತಿದ್ದು, ಮಕ್ಕಳು ಇದರ ಪ್ರಯೋಜನ ಪಡೆದು, ಪೋಷಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿ. ತಿಮ್ಮೇಗೌಡ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 250ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಖ್ಯಾತ ಛಾಯಾಗ್ರಾಹಕ ವಿನಾಯಕ್, ವಸುಮ ಮಂಜುನಾಥ್ ಹಾಗೂ ನಟರಾಜ್ ನೇತೃತ್ವದಲ್ಲಿ ವಿಶೇಷ ವೈಲ್ಡ್ ಲೈಫ್ ಛಾಯಾಗ್ರಹಣ ಪ್ರದರ್ಶನ ಏರ್ಪಡಿಸಲಾಗಿತ್ತು. ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
Discussion about this post