ಕಲ್ಪ ಮೀಡಿಯಾ ಹೌಸ್ | ಹಿಟ್ಟೂರು, ಶಿವಮೊಗ್ಗ |
ನಾವು ಮೈಕಿನಲ್ಲಿ ರೈಲು ಬಿಡುವವರಲ್ಲ, ಶೀಘ್ರವಾಗಿ ಶಿವಮೊಗ್ಗ ರಾಣೇಬೆನ್ನೂರು ರೈಲು ಮಾರ್ಗವನ್ನು ಮಾಡಿ ಹಳಿಯ ಮೇಲೆ ರೈಲನ್ನು ಬಿಡುತ್ತೇವೆ ಇದರಿಂದ ರೈತರಿಗೆ ಅನುಕೂಲವಾಗಲಿದೆ, ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರಿಂದ ಶಿವಮೊಗ್ಗ ಜಿಲ್ಲೆಯಲ್ಲಿ 1500 ಕೋಟಿ ನೀರಾವರಿ ಯೋಜನೆಗಳನ್ನು ಒಂದು ವರ್ಷದಲ್ಲಿ ಮಾಡಿದ್ದೇವೆ, ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಅನೇಕ ಏತ ನೀರಾವರಿ ಯೋಜನೆಗಳ ಕಾಮಗಾರಿ ಮುಗಿದಿದ್ದು ಶೀಘ್ರ ಈ 10 ಕೋಟಿ ಕಾಮಗಾರಿಯಲ್ಲಿ ಈ ರಸ್ತೆಯನ್ನು ನಾವು ಮುಗಿಸುತ್ತೇವೆ ಎಂದು ಸಂಸದ ರಾಘವೇಂದ್ರ ಅವರು ತಿಳಿಸಿದರು.
ಶಿವಮೊಗ್ಗ ನಗರದಿಂದ ಗೆಜ್ಜೆನಹಳ್ಳಿ, ಎಡವಾಲ ಹಿಟ್ಟೂರು ನಾರಾಯಣಪುರ ಮುಖಾಂತರ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಚಿನ್ನಿಕಟ್ಟೆ ಹತ್ತಿರದ SH57ಗೆ ಸೇರುವ ರಸ್ತೆ ಅಭಿವೃದ್ಧಿ ಮತ್ತು ಡಾಂಬರಿಕರಣ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ ಗುದ್ದಲಿಪೂಜೆಯನ್ನು ಸಂಸದರಾದ ಬಿ. ವೈ. ರಾಘವೇಂದ್ರ ಅವರು ನೆರವೇರಿಸಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ್, DCC ಬ್ಯಾಂಕ್ ಅಧ್ಯಕ್ಷರಾದ ಚೆನ್ನವೀರಣ್ಣ, ಶಿಮೂಲ್ ಅಧ್ಯಕ್ಷರಾದ ಶ್ರೀಪಾದ್ ಹೆಗಡೆ, APMC ಅಧ್ಯಕ್ಷರಾದ ಜಗದೀಶ್, ಭೋಜ ನಾಯ್ಕ್,ಷಣ್ಮುಕಪ್ಪ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post