ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವಿಮಾನ ನಿಲ್ದಾಣದಿಂದ #Shivamogga Airport ವಿಮಾನಗಳ ಹಾರಾಟದ ವಿಷಯದಲ್ಲಿ ತಪ್ಪಾಗಿದೆ. 18 ಜನ ಅಗ್ನಿಶಾಮಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೂ ಪರಿಶೀಲನೆ ವೇಳೆ ಎಂಟು ಜನರನ್ನು ಬೇರೆ ವಿಮಾನ ನಿಲ್ದಾಣಕ್ಕೆ ನಿಯೋಜಿಸಲಾಗಿದೆ. ಈ ರೀತಿ ಆಗಿರುವುದಕ್ಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP Raghavendra ತಿಳಿಸಿದರು.
ವಿಮಾನ ನಿಲ್ದಾಣಕ್ಕೆ ವಿಮಾನಯಾ ನಿರ್ದೇಶನಾಲಯ 20 ಲಕ್ಷ ರೂ. ದಂಡ ವಿಧಿಸಿದ ಸಂಬಂಧ ಸಂಸದ ಪ್ರತಿಕ್ರಿಯೆ ನೀಡಿದ ಅವರು, ಡಿಜಿಸಿಎ ನಿಯಮಾವಳಿವಂತೆ ಎಲ್ಲವನ್ನೂ ಜಾರಿಗೆ ತರಲಾಗುವುದು. ಡಿಜಿಸಿಎ ನಿಯಮಾವಳಿಯನ್ನು ರಾಜ್ಯ ಸರ್ಕಾರ ಪಾಲಿಸಬೇಕಿದೆ. ಅಧಿಕಾರಿಗಳ ಅನುಭವ ಕೊರತೆಯಿಂದ ದಂಡ ವಿಧಿಸಲಾಗಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















Discussion about this post