ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಸ್ಲಾಂ ತನ್ನ ಜನಸಂಖ್ಯೆ ಹೆಚ್ಚಿಸಿಕೊಳ್ಳಲು, ಹಿಂದೂಗಳ ನೈತಿಕತೆ ಕುಸಿಯಲು ಮಾತೃದೇವೋಭವ ವಾಕ್ಯವನ್ನು ವಿಕೃತಿಗೊಳಿಸಲು ವೇಶ್ಯಾವಾಟಿಕೆಗಾಗಿ, ಭಯೋತ್ಪಾದನೆಗಾಗಿ ಮಾದಕ ವಸ್ತು ಸಾಗಾಣಿಕೆಗಾಗಿ, ಹನಿಟ್ರ್ಯಾಪ್ ಗಾಗಿ ಸುಳ್ಳು ಪ್ರೀತಿ, ಮೋಸ, ಷಡ್ಯಂತ್ರ ಮಾಡಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಹಿಂದು ಹೆಣ್ಣುಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ. ಈ ಮೂಲಕ ಲವ್ ಜಿಹಾದ್ #Lovejihad ಮಾಡುತ್ತಿದ್ದಾರೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ #Pramod Muthalik ಹೇಳಿದ್ದಾರೆ.
ಅವರು ಇಂದು ಪತ್ರಿಕಾ ಭವನದಲ್ಲಿ ‘ಲವ್ ಜಿಹಾದ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಹಿಂದೂ ಹೆಸರಿನಲ್ಲಿ ಶೇ. 62ರಷ್ಟು ಲವ್ ಜಿಹಾದ್ ಗಳು ಆಗಿದ್ದು, ಬುರ್ಖಾ ಹಾಕದೇ ಇರುವುದಕ್ಕೆ, ನಮಾಜ್ ಮಾಡದೇ ಇರುವುದಕ್ಕೆ, ಗೋಮಾಂಸ ತಿನ್ನದೇ ಇರುವುದಕ್ಕೆ ಶೇ.81ರಷ್ಟು ಕೊಲೆಗಳಾಗಿವೆ. 2022-23ರಲ್ಲಿ 153 ಬರ್ಬರ ಕೊಲೆಗಳಾಗಿದ್ದು, 436 ಲವ್ ಜಿಹಾದ್ ಕೇಸ್ ಗಳಾಗಿವೆ ಎಂದರು.

ಎರಡೇ ದಿನದಲ್ಲಿ ಹೈಕೋರ್ಟ್ ಪೊಲೀಸರ ಕ್ರಮವನ್ನು ಖಂಡಿಸಿ ಪುಸ್ತಕ ಬಿಡುಗಡೆಗೆ ಅವಕಾಶ ನೀಡಿದೆ. ಹಾಗಾಗಿ ಇಂದು ಶಿವಮೊಗ್ಗದಲ್ಲಿ ಪುಸ್ತಕ ಬಿಡುಗಡೆಗೊಳಿಸಿದ್ದೇನೆ ಎಂದರು.

Also read: ಕೆ.ಇ. ಕಾಂತೇಶ್ 45ನೇ ಹುಟ್ಟುಹಬ್ಬ | ಮಾ.27ರಂದು ‘ಆಶೀರ್ವಾದ’ ಕಾರ್ಯಕ್ರಮ
ಅನ್ಯ ಧರ್ಮೀಯರನ್ನು ಮದುವೆಯಾಗಿ ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ನನ್ನ ಬೆಂಬಲವಿದೆ. ಅವರು ಲವ್ ಜಿಹಾದ್ ಮಾಡಿ ಸೂಟ್ ಕೇಸ್ ನಲ್ಲಿ ಹೆಣ ತುಂಬಿ ಕಳಿಸುತ್ತಾರೆ. ಆದರೆ, ಹಿಂದೂ ಧರ್ಮೀಯರು ಮದುವೆಯಾಗಿ ಅವರನ್ನು ಸಗೃಹಿಣಿಯಾಗಿ ನೋಡಿಕೊಳ್ಳುತ್ತಾರೆ ಎಂದರು.

ಮೈಸೂರು ಕ್ಯಾತಮಾರನಹಳ್ಳಿಯ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಸಂಬಂಧ ಕಾರ್ನರ್ ಜಾಗದಲ್ಲಿ ಮಸೀದಿ ನಿರ್ಮಿಸಬೇಕೆಂಬ ಒತ್ತಡ ಇದೆ. ಈಗಾಗಲೇ ಅಲ್ಲಿ 8 ಮಸೀದಿಗಳಿವೆ. ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜು ಎಂಬ ಯುವಕನ ಕೊಲೆಯಾಗಿದೆ. ಬಿಜೆಪಿ ಈ ಬಗ್ಗೆ ಹೋರಾಟ ಹಮ್ಮಿಕೊಳ್ಳಬೇಕು ಎಂದರು.

ಮಂಗಳೂರಿನ ಬೇಂಗ್ರೆ ಸಮೀಪ ಹಿಂದೂ ಹುಡುಗಿಯನ್ನು ಮದುವೆಯಾಗಿ ಬಚ್ಚಿಡುವ ಪ್ರಯತ್ನ ಮಾಡಲಾಗಿತ್ತು. ಅದೇ ರೀತಿ ಅನೇಕ ಕಡೆ ಹಿಂದೂ ಹುಡುಗಿಯರು ಮೋಸದ ಬೆಲೆಗೆ ಬಿದ್ದಿದ್ದನ್ನು ಗಮನಿಸಿ ಅವರನ್ನು ರಕ್ಷಿಸುವ ಕಾರ್ಯ ಮಾಡಿದ್ದೇವೆ. ಹಿಂದೂ ಹುಡುಗಿಯರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಕೂಡ ಶ್ರೀರಾಮಸೇನೆ ಮಾಡುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ದಕ್ಷಿಣ ಪ್ರಾಂತ ಲವ್ ಜಿಹಾದ್ ಪ್ರಮುಖ್ ಸುಂದರೇಶ್ ನರೇಗಲ್, ಕೆ.ಇ. ಕಾಂತೇಶ್, ವಕೀಲರಾದ ಹಾಲಪ್ಪಗೌಡ, ವಾದಿರಾಜ್, ಪವಿತ್ರಾ, ಶೋಭಾ, ಗೀತಾ, ಅಂಬಿಕಾ, ಉಷಾ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post