ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿಂದು ಬರೋಬ್ಬರಿ 64 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 933ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಸೋಂಕಿಗೆ ಇಬ್ಬರು ಮೃತಪಟ್ಟಿದ್ದರೆ, 33 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಿನ್ನೆ ಕೊಂಚ ಕಡಿಮೆ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು. ಆದರೆ, ಇಂದು ದಿಢೀರನೆ 5 ಪಟ್ಟು ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇನ್ನು, ಈವರೆಗೂ 246 ಕಂಟೈನ್ಮೆಂಟ್ ಝೋನ್’ಗಳನ್ನು ಮಾಡಲಾಗಿದ್ದು, ಡಿ ನೋಟಿಫೈಡ್ ಝೋನ್’ಗಳ ಸಂಖ್ಯೆ 45 ಆಗಿದೆ. ಇಂದು ಒಟ್ಟು 316 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, 283ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಬುಲೆಟಿನ್ ತಿಳಿಸಿದೆ.
ತಾಲೂಕುವಾರು ವಿವರ: ಶಿವಮೊಗ್ಗ: 36 ಭದ್ರಾವತಿ: 10 ಶಿಕಾರಿಪುರ: 6 ಸೊರಬ: 5 ತೀರ್ಥಹಳ್ಳಿ: 5 ಇತರೆ ಜಿಲ್ಲೆ: 2
Get In Touch With Us info@kalpa.news Whatsapp: 9481252093
Discussion about this post