ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಲವು ತಿಂಗಳ ಹಿಂದೆ ಸಂಚಾರಕ್ಕೆ ಮುಕ್ತವಾಗಿರುವ ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆಯಲ್ಲಿ ಕೆಲವೊಂದು ಲೋಪದೇಷಗಳಿವೆ ಎಂಬ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಅವರು ಇಂದು ಪರಿಶೀಲನೆ ನಡೆಸಿದರು.
ರೈಲ್ವೆ ಹಿರಿಯ ಅಧಿಕಾರಿಗಳೊಂದಿಗೆ ಸವಳಂಗ ರಸ್ತೆಯ ಮೇಲ್ಸೇತುವೆಯ ಎರಡು ಬದಿಯಲ್ಲಿರುವ ಸರ್ವಿಸ್ ರಸ್ತೆಯ ಕಾಮಗಾರಿಯನ್ನು ಸಂಸದರು ವೀಕ್ಷಿಸಿದರು.
ಮೇಲ್ಸೇತುವೆಯ ಕಾಮಗಾರಿ ನಂತರ ಕೆಲವೊಂದು ಲೋಪದೋಷಗಳ ಬಗ್ಗೆ ಮತ್ತು ಸರ್ವಿಸ್ ರಸ್ತೆಯ ಎರಡು ಬದಿಯ ನಿವಾಸಿಗಳ ಸಮಸ್ಯೆಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಂಸದರು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
Also read: ವಂದೇ ಭಾರತ್ ಸೇರಿ ರೈಲ್ವೆ ಯೋಜನೆಗಳ ಕುರಿತು ಸಂಸದರ ಮಹತ್ವದ ಸಭೆ | ಇಲ್ಲಿದೆ 4 ಪ್ರಮುಖಾಂಶಗಳು
ಪ್ರಮುಖವಾಗಿ ಮೇಲ್ಸೇತುವೆ ಕೊನೆಗೊಳ್ಳುವ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿ ಭಾರಿ ಸಂಚಾರ ಅವ್ಯವಸ್ಥೆ ಉಂಟಾಗುವ ನಿಟ್ಟಿನಲ್ಲಿ ವೃತ್ತವನ್ನು ವಿಸ್ತರಿಸುವ ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಚರ್ಚಿಸಲಾಯಿತು.
ಸರ್ವಿಸ್ ರಸ್ತೆಯ ಎರಡು ಬದಿಯಲ್ಲಿ ಮಳೆ ನೀರು ಹೋಗಲು ಮತ್ತು ಮೇಲ್ಸೇತುವೆಯಿಂದ ಕೆಳಗೆ ಬೀಳುವ ಮಳೆ ನೀರನ್ನು ತಡೆ ಹಿಡಿಯಲು ಹಾಗೂ ಅಂಡರ್’ಪಾಸ್ ಸಿದ್ಧವಾಗಿದ್ದು, ಅಲ್ಲಿನ ಸಣ್ಣಪುಟ್ಟ ಸಮಸ್ಯೆಯನ್ನು ಕೂಡ ಬಗೆಹರಿಸಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ರೈಲ್ವೆ ಹಿರಿಯ ಅಧಿಕಾರಿಗಳಾದ ಚೀಫ್ ಇಂಜಿನಿಯರ್ ಪ್ರದೀಪ್ ಪುರಿ, ಮೂರ್ತಿರಾಜ್, ಗೋಠೆನ್, ಹರ್ಷವರ್ಧನ್, ರಾಜಕುಮಾರ್, ಸಿದ್ದಪ್ಪ, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಸ್ಮಾರ್ಟ್ ಸಿಟಿಯ ವಿಜಯಕುಮಾರ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post