ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನಲ್ಲಿ ಮಧ್ಯಾಹ್ನದ ವೇಳೆಗೆ ಗುಡುಗು ಹಾಗೂ ಸಿಡಿಲಿನಿಂದ ಕೂಡಿದ ಮಳೆ ಸುರಿದಿದ್ದು, ಸಂತೋಷ ಹಾಗೂ ಆತಂಕಕ್ಕೂ ಕಾರಣವಾಗಿದೆ.
ನಾಲ್ಕು ಗಂಟೆ ವೇಳೆಗೆ ಎರಡೂ ನಗರಗಳಲ್ಲಿ ಭಾರೀ ಗುಡುಗು ಹಾಗೂ ಬಿರುಗಾಳಿಯ ಆರ್ಭಟ ಕಂಡುಬಂದಿದ್ದು, ಭಾರೀ ವೇಗದಲ್ಲಿ ಬೀಸಿದ ಗಾಳಿ ಹಾಗೂ ಕಿವಿಗಡಚಿಕ್ಕುವ ರೀತಿಯಲ್ಲಿ ಸಿಡಿಲು ಹೊಡೆದಿದ್ದು, ಕೆಲವೇ ಕ್ಷಣಗಳಲ್ಲಿ ಭಾರೀ ವರ್ಷಧಾರೆ ಸುರಿದಿದ್ದು, ಕಾದ ಕಾವಲಿಯಂತಾಗಿದ್ದ ಎರಡೂ ನಗರಗಳಲ್ಲಿ ತಂಪಾದ ವಾತಾವರಣ ಮೂಡಿಸಿತು.
ಮರ ಬಿದ್ದು ಮನೆ ಹಾನಿ:
ನಗರದ ಹೊಸಮನೆ ಬಡಾವಣೆಯ ನಾಲ್ಕನೇ ಮುಖ್ಯರಸ್ತೆಯಲ್ಲಿ ಈಗ ಬಿದ್ದಂತಹ ಭಾರೀ ಗಾಳಿ ಮಳೆಗೆ ಮನೆಯ ಮೇಲೆ ಮರ ಬಿದ್ದಿದ್ದು, ಮನೆಯ ಮೇಲ್ಚಾವಣಿ ಸಂಪೂರ್ಣ ಜಖಂಗೊಂಡಿದ್ದು, ಮನೆಯೊಳಗಿದ್ದ ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಹಾಗೂ ಪಾಲಿಕೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Also read: ಪುನೀತ್ ಆದರ್ಶ ಪಾಲನೆಗಾಗಿ ರಾಜಕೀಯ ತ್ಯಜಿಸಲು ನಿರ್ಧಾರ: ನಾಗರಾಜ ನಾಯ್ಕ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post