ಭದ್ರಾವತಿಯ ಶರತ್ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ತುಂಗಾ ಜಲಾಶಯ ಬಳಿ ಯುವಕ ನೀರು ಪಾಲಾಗಿದ್ದಾನೆ.
ಶಿವಮೊಗ್ಗ ತಾಲೂಕಿನ ಗಾಜನೂರು ಜಲಾಶಯದ ಬಳಿ ನಿನ್ನೆ ಪ್ರವಾಸಕ್ಕೆ ಬಂದಿದ್ದ ವೇಳೆ ಘಟನೆ ನಡೆದಿದೆ. ಮಿಳ್ಳಘಟ್ಟದ ಹರೀಶ್(22) ನೀರು ಪಾಲಾದ ಯುವಕ ಎಂದು ಹೇಳಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಯುವಕನಿಗಾಗಿ ಹುಡುಕಾಟ ನಡೆಸಲಾಗಿದೆ. ಯಾಂತ್ರಿಕ ಬೋಟ್ನಲ್ಲಿ ಯುವಕನಿಗಾಗಿ ಹುಡುಕಾಟ ನಡೆದಿದ್ದು, ಸ್ಥಳೀಯ ಮೀನುಗಾರರು, ಈಜುಗಾರರು ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.
Also read: ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾನತೆ, ಸಾಮರಸ್ಯ ಬೆಸೆಯುತ್ತವೆ
ಡ್ಯಾಂ ಪ್ರವೇಶಕ್ಕೆ ನಿಷೇಧ ಹಿನ್ನೆಲೆ ಚಾನಲ್ ಪಕ್ಕದ ದಾರಿಯಲ್ಲಿ ಸ್ನೇಹಿತರು ಹೋಗಿದ್ದು, ಅಲ್ಲಿನ ಕಾಮಗಾರಿ ನಡೆಯುತ್ತಿರುವ ಸೇತುವೆ ಬಳಿ ಹೋಗಿದ್ದ ವೇಳೆ ಹರೀಶ್ ನೀರು ಪಾಲಾಗಿದ್ದಾನೆ ಎನ್ನಲಾಗಿದೆ. ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















