ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP)ನ ಪುರ್ಣಾವಧಿ ಕಾರ್ಯಕರ್ತರಾಗಿ ಎರಡು ವರ್ಷ ಶಿವಮೊಗ್ಗದಲ್ಲಿಯೂ ವಿದ್ಯಾರ್ಥಿಗಳ ಪರವಾಗಿ ಸೇವೆ ಸಲ್ಲಿಸಿ ಹಾಲಿ ಬೆಂಗಳೂರಿನಲ್ಲಿದ್ದ ಸುಭಾಷ್ ಅವರು ನಿನ್ನೆ ಹುಬ್ಬಳ್ಳಿ ಸಮೀಪ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು ವಿದ್ಯಾರ್ಥಿ ಸಮೂಹಕ್ಕೆ ತುಂಬಲಾರದ ನಷ್ಟವಾಗಿದೆ.
ಶಿವಮೊಗ್ಗದ ಶ್ರೀ ರಾಘವೇಂದ್ರ ಮಠದ ಎದುರು ಇರುವ ABVP ಕಚೇರಿಯಲ್ಲಿ ಮೃತರ ಆತ್ಮಕ್ಕೆ ಚಿರ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎಬಿವಿಪಿ ಪ್ರಮುಖರಾದ ವಿಜಯ್, ಚಂದ್ರಶೇಖರ್, ನಟರಾಜ ಭಾಗವತ, ಡಾ. ಬಾಲಕೃಷ್ಣ ಹೆಗಡೆ ಮೊದಲಾದವರು ಸುಭಾಷ್ ಅವರ ದೇಶ ಭಕ್ತಿ, ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಕಾಳಜಿ, ಸ್ನೇಹಪರ ವ್ಯಕ್ತಿತ್ವದ ಗುಣಗಾನ ಮಾಡಿದರು. ಮೃತರ ಕುಟುಂಬಕ್ಕೆ ಭಗವಂತ ದುಖ: ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post