ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೀವನದ ಪ್ರತಿ ಹಂತಗಳು ಸವಾಲುಗಳ ಸರಮಾಲೆಯಾಗಿದ್ದು ಆತ್ಮವಿಶ್ವಾಸದಿಂದ ಸ್ವೀಕರಿಸುತ್ತಾ ಮುನ್ನಡೆಯಿರಿ ಎಂದು ಶಿವಮೊಗ್ಗ ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ ಅಭಿಪ್ರಾಯಪಟ್ಟರು
ಸೋಮವಾರ ನಗರದ ಎಸ್.ವಿ.ಕೃಷ್ಣಮೂರ್ತಿ ರಾಷ್ಟ್ರೀಯ ಮಹಾವಿದ್ಯಾಲಯದ ವತಿಯಿಂದ ಏರ್ಪಡಿಸಿದ್ದ ಕಾನೂನು ಸೇವೆಗಳ ಅರಿವು ಮತ್ತು ಸೈಬರ್ ಕ್ರೈಂ ಕುರಿತ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಬದುಕಿನಲ್ಲಿ ಶಿಕ್ಷಣವೆಂಬುದು ಪ್ರಮುಖವಾದ ವಿಚಾರ. ಕಲಿಸಿದ ಗುರುವಿನ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕಿದೆ. ಶಿಕ್ಷಣ ನಂತರದ ವೃತ್ತಿ ದಕ್ಷತೆಯಿಂದ ಕೂಡಿರಲಿ, ಆಗ ಮಾತ್ರ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯ ಎಂದು ಹೇಳಿದರು.
ಪೋಲೀಸ್ ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ್ ಮಾತನಾಡಿ ವಿದ್ಯಾರ್ಥಿಗಳು ಗೂಗಲ್ ಬದಲಾಗಿ ಗುರುಗಳನ್ನು ಹೆಚ್ಚು ನಂಬಿರಿ. ಮೊಬೈಲ್ ಮೂಲಕ ಎಲ್ಲವೂ ಸಾಧ್ಯವೆಂಬ ಭ್ರಮೆ ಬೇಡ. ಇಂದು ಹೆಚ್ಚುತ್ತಿರುವ ಸೈಬರ್ ಕ್ರೈಂಗಳೇ ಆಧುನಿಕ ಸಮಾಜದ ಹಿನ್ನಡೆಗೆ ಮೂಲ ಕಾರಣ. ಈ ಹಿನ್ನಲೆಯಲ್ಲಿ ಪ್ರಶಿಕ್ಷಣಾರ್ಥಿಗಳು ಕಾನೂನುಗಳ ಸಮರ್ಪಕ ತಿಳುವಳಿಕೆ ಅವಶ್ಯಕವಾಗಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ.ಕೆ.ಚಿದಾನಂದ ಮಾತನಾಡಿ ತಾಂತ್ರಿಕತೆಗಿಂತ ಮೌಲ್ಯಗಳಿಗೆ ಹೆಚ್ಚು ಬೆಲೆ ಕೊಡಿ. ವಿದ್ಯಾರ್ಥಿಗಳು ಅನುಭವಗಳ ಆಧಾರದ ಮೇಲೆ ಅರಿವನ್ನು ಪಡೆದುಕೊಳ್ಳಬೇಕಿದೆ ಎಂದು ಹೇಳಿದರು
ಕಾಲೇಜಿನ ಸಹ ಪ್ರಾದ್ಯಾಪಕರಾದ ಡಾ.ಶರಣ ನಾಯಕ್, ಡಾ.ಮಂಜು.ಎನ್.ಡಿ, ಡಾ.ಲಾವಣ್ಯ, ಸಾರಿಕ ಬಾನು, ವೀಣಾ, ಅರುಂಧತಿ, ಪ್ರಶಾಂತ್ ಉಪಸ್ಥಿತರಿದ್ದರು. ಕಾಂಚನ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post