ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚೆಫ್ ಚಿದಂಬರ #Chef Chidambara ಎನ್ನುವುದು ಕೊಲೆಗಳ ಸುತ್ತ ನಡೆಯುವ ಆಕ್ಷನ್ ಥ್ರಿಲ್ಲರ್ ಕಥಾ ಹಂದರದೊಂದಿಗೆ ಹಾಸ್ಯದ ಸವಿಯನ್ನೂ ಸಹ ಹೊಂದಿರುವ ವಿಭಿನ್ನ ಚಿತ್ರವಾಗಿದ್ದು, ಚಿತ್ರರಸಿಕರು ಪ್ರೋತ್ಸಾಹಿಸಬೇಕು ಎಂದು ಚಿತ್ರದ ನಾಯಕ ನಟ ಅನಿರುದ್ ಜತ್ಕರ್ #Anirud Jathkar ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗದವರೇ ಆದ ರೂಪ ಡಿ.ಎನ್. ನಿರ್ಮಾಣ ಮಾಡಿರುವ ಎಂ.ಆನಂದರಾಜ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಚೆಫ್ ಚಿದಂಬರ ಜೂನ್ 14ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಅತ್ಯಂತ ಯಶಸ್ವಿಯತ್ತ ಸಾಗುತ್ತಿದೆ ಎಂದರು.
ಈ ಚಿತ್ರವು ಒಂದು ಕೌತುಕವಾಗಿದೆ. ವಿನೂತನ ಪ್ರಯತ್ನ ಇದಾಗಿದೆ. ಕೊಲೆಗಳ ಸುತ್ತ ನಡೆಯುವ ಆ್ಯಕ್ಷನ್ ಥ್ರಿಲರ್ ಕಥಾ ಹಂದರಹೊಂದಿರುವ ಹಾಸ್ಯಮಯ ಚಿತ್ರ ಇದಾಗಿದೆ. ಕೊಲೆಗಳ ಸುತ್ತ ಇರುವ ಚಿತ್ರವಾದರೂ ಕೂಡ ಇದೊಂದು ಹಾಸ್ಯದ ಸುತ್ತ ಇರುವ ಭಾವನೆಗಳನ್ನು ಬಿಂಭಿಸುವ ಸಂಪೂರ್ಣ ಮನರಂಜನೆ ನೀಡಿರುವ ಚಿತ್ರವಾಗಿದ್ದು, ನಾಟ್ಯ, ಸಾಹಸ, ಉತ್ತಮ ಸಂಗೀತ, ಸಾಹಿತ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದ ಇಡೀ ಕುಟುಂಬ ಕುಳಿತು ನೋಡುವ ಚಿತ್ರವಾಗಿದೆ ಎಂದರು.
Also read: 102 ಕ್ರೀಡೆ, 11 ಸಾವಿರ ಸ್ಪರ್ಧಿಗಳು | ಜುಲೈ ತಿಂಗಳು ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ
ಈ ಚಿತ್ರದಲ್ಲಿ ನಿಧಿಸುಬ್ಬಯ್ಯ, ಹಾಗೂ ರೆಚಲ್ ಡೇವಿಡ್ ಎಂಬ ಇಬ್ಬರು ನಾಯಕಿಯರಿದ್ದಾರೆ. ಚಿತ್ರಕ್ಕೆ ಶಿವಮೊಗ್ಗದವರೇ ಆದ ಋತ್ವಿಕ್ ಮುರಳೀಧರ್ ಸಂಗೀತ ನೀಡಿದ್ದು, ಉದಯ ಲೀಲಾ ಛಾಯಾಗ್ರಹಣ ಮಾಡಿದ್ದಾರೆ ಎಂದರು.
ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಯಾವಾಗಲೂ ಮನ್ನಣೆ ನೀಡುತ್ತ ಬಂದಿದ್ದಾರೆ. ಶಿವಮೊಗ್ಗದಲ್ಲಿ ಭಾರತ್ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಶಿವಮೊಗ್ಗದ ಪ್ರೇಕ್ಷಕರು ಈ ಚಿತ್ರವನ್ನು ನೋಡಿ ನಮ್ಮನ್ನು ಹರಸಬೇಕು ಎಂದರು.
ನಿರ್ಮಾಪಕಿ ರೂಪ ಡಿ.ಎನ್. ಮಾತನಾಡಿ, ನಾನು ಶಿವಮೊಗ್ಗದವಳೇ ಆಗಿದ್ದೇನೆ. ಸೊರಬ ನಮ್ಮ ಊರು, ಶಂಕರಘಟ್ಟದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದೆ. ವಿಷ್ಣುವರ್ಧನ್ ಅಭಿಮಾನಿ ನಾನು ಚಿತ್ರ ನಿರ್ಮಾಣ ಮಾಡಬೇಕು ಎಂದುಕೊಂಡಾಗ ನಟ ಅನಿರುದ್ದ್ ನೆನಪಾದರು. ಅವರನ್ನೇ ನಾಯಕನನ್ನಾಗಿ ಮಾಡಿಕೊಂಡು ಈ ಚಿತ್ರವನ್ನು ನಿರ್ಮಿಸಿದ್ದೇನೆ. ಇಲ್ಲಿನ ಹಾಸ್ಯ ನವೀರಾಗಿದೆ. ಹೊಸಬರು, ಹಳಬರು, ನಟಿಸಿದ್ದಾರೆ. ಶರತ್ ಲೋಹಿತಾಶ್ವ ಶಿವಮಣಿ, ಶ್ರೀಧರ್, ಮಹಾಂತೇಶ್ ಮುಂತಾದವರಿದ್ದಾರೆ. ಇದೊಂದು ಒಳ್ಳೆಯ ಮನೋರಂಜನೆಯ ಚಿತ್ರ ನಮ್ಮ ಚಿತ್ರತಂಡವನ್ನು ಆಶೀರ್ವದಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಗಣೇಶ್, ಮಾಧವಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post