ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ #Renukaswamy murder case ಸಂಬಂಧಿಸಿದಂತೆ ಬಂಧನದಲ್ಲಿರುವ ನಟ ದರ್ಶನ್’ನನ್ನು ಬಚಾವ್ ಮಾಡಲು ಕೆಲವು ಸಚಿವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದು, ಇವರಿಗೆಲ್ಲಾ ಸಿಎಂ ಹಾಗೂ ಗೃಹ ಸಚಿವರು ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ವರದಿಯಾಗಿದೆ.
ದರ್ಶನ್’ನನ್ನು #Darshan ಕೊಲೆ ಪ್ರಕರಣದಿಂದ ಹೊರತರಲು ಹಳೇ ಮೈಸೂರು ಭಾಗದ ಕೆಲವು ಶಾಸಕರು ಹಾಗೂ ಸಚಿವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಲವು ದಿನಗಳಿಂದ ಆರೋಪಿಸಲಾಗಿದೆ.
ದರ್ಶನ್’ನನ್ನು ಬಚಾವ್ ಮಾಡಲು ತಮ್ಮ ಬಳಿ ಬಂದ ಸಚಿವರಿಗೆ ಅದರಲ್ಲೂ ಬೆಂಗಳೂರಿನ ಓರ್ವ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Also read: ಕೊಲೆಗಳ ಸುತ್ತ ಸುತ್ತುವ ಆಕ್ಷನ್ ಥ್ರಿಲ್ಲರ್, ಹಾಸ್ಯ ಚಿತ್ರ ಚೆಫ್ ಚಿದಂಬರ: ನಟ ಅನಿರುದ್ ಜತ್ಕರ್
ದರ್ಶನ್ ವಿಚಾರದಲ್ಲಿ ಶಿಫಾರಸ್ಸು ಮಾಡಲು, ಬಚಾವ್ ಮಾಡಲು ಯಾವ ಸಚಿವರು ಹಾಗೂ ಶಾಸಕರೂ ಸಹ ಯಾವುದೇ ಕಾರಣಕ್ಕೂ ನನ್ನ ಬಳಿ ಬರಬೇಡಿ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಇನ್ನು, ಲಾಭಿ ಮಾಡುವವರ ಪ್ರಯತ್ನ ಗೃಹ ಸಚಿವರ ಪರಮೇಶ್ವರ ಅವರ ಬಳಿಯೂ ಸಹ ನಡೆದಿದೆ ಎಂದು ವರದಿಯಾಗಿದೆ.
ದರ್ಶನ್ ಪ್ರಕರಣದಲ್ಲಿ ಏನೂ ಮಾಡಲು ಆಗುವುದಿಲ್ಲ. ಪೊಲೀಸರು ಅವರ ಕೆಲಸ ಮಾಡುತ್ತಿದ್ದಾರೆ. ಕಾನೂನು ರೀತಿಯಲ್ಲಿ ನಡೆಯುತ್ತಿದೆ. ಈ ವಿಚಾರಗಳನ್ನು ಪ್ರಸ್ತಾಪ ಮಾಡಬೇಡಿ ಎಂದು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post