ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನವ ಭಾರತವು ನವ ಶಕ್ತಿಯೊಂದಿಗೆ ಮುನ್ನಡೆಯಲಿದೆ, ಯುವಕರ ಸಬಲೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ನೀಡಿದೆ. ಕೇಂದ್ರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 10 ಲಕ್ಷ ಹುದ್ದೆಗೆ ಒಂದೂವರೆ ವರ್ಷದೊಳಗೆ ತುರ್ತು ನೇಮಕಾತಿ ಮಾಡುವಂತೆ ಸೂಚಿಸಿದ್ದಾರೆ, ಹಾಗೂ ಸೇನೆಗೆ 46000 ಅಗ್ನಿ ವೀರರನ್ನು 4 ವರ್ಷದ ಸೇವಾವದಿಯನ್ನು ನೇಮಕ ಮಾಡಿಕೊಳ್ಳಲಿದ್ದು, ದೇಶ ಸೇವೆಗೆ ನಮ್ಮ ಯುವಕ/ಯುವತಿಯುರು ಉತ್ಸಾಹ ತೋರಿಸುವಂತೆ ಸಂಸದ ಬಿ.ವೈ. ರಾಘವೇಂದ್ರ MP Raghavendra ಕರೆ ನೀಡಿದ್ದಾರೆ.
‘ಅಗ್ನಿ ಪಥ್ ‘ ಯೋಜನೆ ಜಾರಿಗೆ ತಂದಿರುವುದು ನಮ್ಮ ಉತ್ಸಾಹಿ ದೇಶಭಕ್ತ ಯುವಕರಿಗೆ ಸೇನೆಗೆ ಸೇರುವ ಸದಾವಕಾಶವನ್ನು ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದೀಜಿ ಅವರಿಗೆ, ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಹಾಗೂ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Also read: ತೀರ್ಥಹಳ್ಳಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ವಾಗ್ಧಾಳಿ
ಇದು ಯುವಕರ ಪಾಲಿಗೆ ಕೇವಲ ಉದ್ಯೋಗಾವಕಾಶವಲ್ಲ. ಶಿಸ್ತು, ಮ್ಯಾನೇಜೆಂಟ್, ಜೀವನ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳೋದಕ್ಕೆ ಭಾರತೀಯ ಸೇನೆಗಿಂತ ಉತ್ತಮ ಸ್ಥಳ ಇನ್ನೊಂದಿಲ್ಲ. ಸದೃಢ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಿರುವ ಕ್ರಾಂತಿಕಾರಿ ಹೆಜ್ಜೆ ಇದಾಗಿದೆ.
‘ಅಗ್ನಿಪಥ’ ಯೋಜನೆಯಡಿ ‘ಅಗ್ನಿವೀರ’-ಸ್ವಯಂ ಸೇವಕರಾಗಿ ಆಯ್ಕೆಯಾಗಲು ಎಸ್.ಎಸ್.ಎಲ್.ಸಿ. ಪಾಸಾದ 17.5 ರಿಂದ 21 ರ ನಡುವಿನ ವಯೋಮಾನದವರು ಅರ್ಹರು. ‘ಅಗ್ನಿವೀರರಿಗೆ’ ಸಶಸ್ತ್ರ ಪಡೆಗಳಲ್ಲಿ ದೇಶಕ್ಕಾಗಿ 4 ವರ್ಷಗಳ ಕಾಲ ಸೇವೆ ಸಲ್ಲಿಸುವ ಸುವರ್ಣಾವಕಾಶವಿದೆ.
ಸಶಸ್ತ್ರ ಪಡೆಗಳಾದ ಭೂಸೇನೆ, ವಾಯುಸೇನೆ ಹಾಗೂ ನೌಕಾ ಪಡೆಗಳಲ್ಲಿ ಸೇವೆ ಸಲ್ಲಿಸಬಹುದು. 4 ವರ್ಷಗಳ ಬಳಿಕ ಅರ್ಹತ- ಫಿಟ್‌ನೆಸ್ ಆಧರಿಸಿ ಶೇ. 25 ಅಗ್ನಿವೀರರುಗಳ ಮರು-ಸೇರ್ಪಡೆ- ಸೇವಾ ಮುಂದುವರಿಕೆಗೂ ಅವಕಾಶವಿದೆ. ಹೆಚ್ಚಿನ ಮಾಹಿತಿಯನ್ನು ಕೆಳಗಿನ ಲಿಂಕ್ ಮೂಲಕ ಪಡೆಯಬಹುದು https://www.mod.gov.in/
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post