ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ #Keladi Shivappanayaka VV ಶಿವಮೊಗ್ಗ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ–2025 ರ ಅಂಗವಾಗಿ “ಕೃಷಿ ವಸ್ತು ಪ್ರದರ್ಶನ–2025” ಡಿಸೆಂಬರ್ 22 ರಂದು ವಿಜೃಂಭಣೆಯಿಂದ ನಡೆಯಲಿದೆ.
ಈ ಪ್ರದರ್ಶನವನ್ನು ಶಿಕಾರಿಪುರ ತಾಲೂಕಿನ ಚುರ್ಚಿಗುಂಡಿ ಗ್ರಾಮ ಒನ್ ಕೇಂದ್ರ ಮುಂಭಾಗದ ಬಳಿ ಆಯೋಜಿಸಲಾಗಿದ್ದು, ವಿವಿಧ ಕೃಷಿ–ತೋಟಗಾರಿಕೆ ತಂತ್ರಜ್ಞಾನಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ವಿಶೇಷ ಅವಕಾಶ ಸಿಗಲಿದೆ.
ರೈತರ ಮತ್ತು ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೆಸೆಯಲ್ಲಿ ಈ ಕೃಷಿ ವಸ್ತು ಪ್ರದರ್ಶನ–2025 ಮಹತ್ವದ ಹೆಜ್ಜೆಯಾಗಿದೆ. ಈ ಪ್ರದರ್ಶನದಲ್ಲಿ ಸಮಗ್ರ ಬೆಳೆ ಪದ್ಧತಿ, ಅಂತರ ಬೆಳೆ ಪದ್ಧತಿ, ಪಶು ಸಂಗೋಪನೆ, ಕೋಳಿ ಸಾಕಾಣಿಕೆ ಮತ್ತು ಮೀನು ಸಾಕಾಣಿಕೆ ತಂತ್ರಜ್ಞಾನ,ಸಾವಯವ ಕೃಷಿ,ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ, ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ,ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು, ಕೃಷಿ ಉತ್ಪನ್ನಗಳ ಸಂಸ್ಕರಣೆ, ಅಣಬೆ ಬೇಸಾಯ, ಸೂಕ್ಷ್ಮಾಣು ಜೀವಿಗಳ ಉಪಯೋಗ, ನವೀನ ತಂತ್ರಜ್ಞಾನ, ಸೇರಿದಂತೆ ನೂರಕ್ಕೂ ಹೆಚ್ಚು ವಿಷಯಗಳನ್ನು ಒಳಗೊಂಡಿದೆ. ರೈತರಿಗೆ ನೇರವಾಗಿ ತಜ್ಞರಿಂದ ಸಲಹೆ ಪಡೆಯುವ ಅವಕಾಶವೂ ಇದೆ.
ಎಲ್ಲಾ ಗ್ರಾಮಗಳ ರೈತರು, ಸ್ವಸಹಾಯ ಗುಂಪುಗಳು, ಯುವಕರು ಮತ್ತು ಕೃಷಿ ಪ್ರೇಮಿಗಳು ಪ್ರದರ್ಶನದಲ್ಲಿ ಭಾಗವಹಿಸಬೇಕೆಂದು ಆಯೋಜಕರು ಹಾರೈಸಿದ್ದಾರೆ.
ನಿಮ್ಮ ಜ್ಞಾನವೃದ್ಧಿಗೆ, ತಂತ್ರಜ್ಞಾನ ಪರಿಚಯಕ್ಕೆ ಮತ್ತು ಹೊಸ ಅವಕಾಶಗಳ ಅನ್ವೇಷಣೆಗೆ ಇದು ಚಿನ್ನದ ಅವಕಾಶ.
ಸಿರಿಧಾನ್ಯ ಉತ್ಪನ್ನಗಳು, ಜೈವಿಕ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳು, ಬೀಜ–ರಸಗೊಬ್ಬರ ಕಂಪನಿಗಳು, ಕೃಷಿ ಉತ್ಪನ್ನಗಳು, ನವೀನ ತಂತ್ರಜ್ಞಾನ ವಸ್ತುಗಳು ಹಾಗೂ ಕೃಷಿ ಸಂಬಂಧಿತ ಇತ್ಯಾದಿ ವಸ್ತುಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಸ್ಟಾಲ್‌ಗಳನ್ನು ಸ್ಥಾಪಿಸಲು ಬಯಸುವವರಿಗೆ ಅವಕಾಶ ಕಲ್ಪಿಸಲಾಗಿದೆ.
ಸ್ಟಾಲ್‌ಗಳನ್ನು ಬುಕ್ ಮಾಡಬಯಸುವವರು ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಬಹುದು. ಪವನ್ : 8073018635, ಶ್ರೇಯಸ್: 8867238204, ಕಾರ್ತಿಕ್ : 6363127930.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















