ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅರ್ಥೈಟಿಸ್ (ಮಂಡಿನೋವು) ಕಾಯಿಲೆಗೆ ಅಮೃತ್ ನೋನಿ #Amrith Noni ಸಿದ್ಧೌಷಧಿ ಆಗಿದ್ದು, ಈಗ ಕ್ಲಿನಿಕಲ್ ಟ್ರಯಲ್ ನಿಂದ ಸುರಕ್ಷಿತ ಎಂದು ಸಾಬೀತಾಗಿದೆ ಎಂದು ಅಮೃತ್ ನೋನಿ ವ್ಯಾಲ್ಯೂ ಪ್ರೊಡಕ್ಟ್ ಪ್ರೈ. ಲಿ. ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಕೆ. ಶ್ರೀನಿವಾಸಮೂರ್ತಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಅಮೃತ್ ನೋನಿ ಎಂಬುದು ಮಂಡಿ ನೋವು, ಸಂಧಿವಾತ, ಮಧುಮೇಹ, ಬಿಪಿ ಮುಂತಾದ ಕಾಯಿಲೆಗಳಿಗೆ ಸೂಕ್ತ ಮದ್ದಾಗಿದೆ. ನೋವು ನಿವಾರಕವಾಗಿದೆ. ಈಗ ಅದು ಮತ್ತಷ್ಟು ವಿಶ್ವಾಸಾರ್ಹತೆ ಗಳಿಸಿದ್ದು, ವ್ಯಾಲ್ಯೂ ಪ್ರೊಡಕ್ಟ್ ಪ್ರೈ. ಲಿ. ನವರ ಮಾರ್ಗಸೂಚಿಗಳ ಅಡಿಯಲ್ಲಿ ನಡೆಸಲಾದ ಕ್ಲಿನಿಕಲ್ ಟ್ರಯಲ್ ಗಳಲ್ಲಿ ಯಶಸ್ವಿಯಾಗಿ ಮತ್ತಷ್ಟು ನಂಬಿಕೆ ಅರ್ಹವಾಗಿದೆ ಎಂದರು.
ಆಯುರ್ವೇದ ಔಷಧಿಗಳನ್ನು ಕ್ಲಿನಿಕಲ್ ಟ್ರಯಲ್ ಗಳಿಗೆ ಒಳಪಡಿಸುವುದು ಅಗತ್ಯವಲ್ಲದಿದ್ದರೂ ನಂಬಿಕೆ ಪ್ರಾಮಾಣಿಕತೆಯನ್ನು ನಿರ್ಮಿಸಲು ಇದು ಅತ್ಯಂತ ಅಗತ್ಯ ಕ್ರಮವಾಗಿದೆ. ಈ ಹಿನ್ನಲೆಯಲ್ಲಿ ಸಿ.ಟಿ.ಆರ್.ಐ. ಇಂಡಿಯಾದ ಮಾರ್ಗಸೂಚಿಗಳ ಅಡಿಯಲ್ಲಿ ಅಮೃತ್ ನೋನಿ ಆರ್ಥೋಪ್ಲಸ್ ಗೆ ಸಂಬಂಧಿಸಿದ ಡಬಲ್ ಬ್ಲೆಂಡೆಡ್ ಮತ್ತು ರಾಂಡಮೈಸ್ಡ್ ಹ್ಯೂಮನ್ ಕ್ಲಿನಿಕಲ್ ಟ್ರಯಲ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಸುಮಾರು 120 ಜನರಲ್ಲಿ ವಿವಿಧ ರೀತಿಯಲ್ಲಿ ಇದನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಈ ಎಲ್ಲಾ ಪರೀಕ್ಷೆಗಳಲ್ಲಿ ಅಮೃತ್ ನೋನಿ ಯಶಸ್ವಿಯಾಗಿ ಹೊರಹೊಮ್ಮಿದೆ ಎಂದರು.
Also read: ಜ. 23-28 | ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಯಜುಃ ಸಂಹಿತಾಯಾಗ
ಅಮೃತ್ ನೋನಿ ಹೆಲ್ತ್ ಕೇರ್ ವಿಭಾಗದ ಮುಖ್ಯಸ್ಥ ಡಾ. ಸಂದೀಪ್ ಬೆಣಕಲ್ ಮಾತನಾಡಿ, ಪ್ರಾತ್ಯಕ್ಷತೆ ಮೂಲಕ ಕ್ಲಿನಿಕಲ್ ಟ್ರಯಲ್ ಗಳನ್ನು ತೋರಿಸಿ ಅಮೃತ್ ನೋನಿಯ ಮಹತ್ವವನ್ನು ಮತ್ತು ಈ ಉತ್ಪನ್ನದಲ್ಲಿ ಬಳಸಲಾದ ನೋನಿ ಹಾಗೂ ಔಷಧಿಯ ಗಿಡ ಮೂಲಿಕೆಗಳ ವಿವರಗಳನ್ನು ತಿಳಿಸಿ ದೀರ್ಘಕಾಲಿನ ಕೀಲು ನೋವಿನ ಸಮಸ್ಯೆಗಳಿಗೆ ಇದು ಸೂಕ್ತ ಮತ್ತು ಅತ್ಯುತ್ತಮ ಆಯ್ಕೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವ್ಯಾಲ್ಯೂ ಪ್ರೊಡಕ್ಟ್ ನ ಸಂಸ್ಥಾಪಕ ನಿರ್ದೇಶಕಿ ಎ.ಎಸ್. ಅಂಬುಜಾಕ್ಷಿ, ಡಾ. ಮಹಂತಸ್ವಾಮಿ ಹಿರೇಮಠ, ಶಶಿಕಾಂತ್ ನಾಡಿಗ್, ಇಂಚರ ನಾಡಿಗ್, ಸೌರಭ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post