ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿನ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಅವರು ಮಹತ್ವದ ಸಭೆ ನಡೆಸಿದ್ದು, ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹಲವು ಯೋಜನೆಗಳ ಕುರಿತಾಗಿ ಚರ್ಚೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ರೈಲ್ವೆ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಸಂಬಂಧಿಸಿದಂತೆ ರೈಲ್ವೇ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ಯೋಜನೆಗೆ ಹೊಂದಿಕೊಂಡಿರುವ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗಿನ ಮಹತ್ವದ ಸಭೆ ಇದಾಗಿತ್ತು.
Also read: ದರ್ಶನ್ ಪ್ರಕರಣ | ಎಸ್’ಪಿಪಿ ಬದಲಾವಣೆ ವದಂತಿ | ಸಿದ್ದರಾಮಯ್ಯ ಬಿಗ್ ಸ್ಟೇಟ್ಮೆಂಟ್
ಯಾವೆಲ್ಲಾ ಯೋಜನೆಗಳ ಚರ್ಚೆಯಾಯ್ತು?
- ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ನೂತನ ರೈಲ್ವೆ ಮಾರ್ಗದ ಮೊದಲ ಮತ್ತು ಎರಡನೇ ಹಂತದ ಕಾಮಗಾರಿ ಸಾಗಿರುವ ಕುರಿತು ಮಾಹಿತಿ ಸಂಗ್ರಹ.
- ಭದ್ರಾವತಿ ಸೇರಿದಂತೆ ಹೊಸದಾಗಿ ಅನುಮೋದನೆ ದೊರಕಿರುವ ರೈಲ್ವೇ ಮೇಲ್ಸೇತುವೆ ಮತ್ತು ರೈಲ್ವೇ ಕೆಳಸೇತುವೆ ಕಾಮಗಾರಿ ಸಾಗಿರುವ ಹಂತದ ಕುರಿತು ಮಾಹಿತಿ ಸಂಗ್ರಹ.
- ಬೀರೂರು-ಶಿವಮೊಗ್ಗ ರೈಲ್ವೆ ಡಂಬಲಿAಗ್ ಯೋಜನೆ ಶೀಘ್ರವಾಗಿ ಪ್ರಾರಂಭಿಸುವ ಕುರಿತು ಮಹತ್ವದ ಚರ್ಚೆ.
- ಕೋಟೆ ಗಂಗೂರಿನಲ್ಲಿ ನಡೆಯುತ್ತಿರುವ ಕೋಚಿಂಗ್ ಡಿಪೋ ಕಾಮಗಾರಿ ಸಾಗಿರುವ ಹಂತದ ಕುರಿತು ಮಾಹಿತಿ ಪಡೆದು ಒಂದೇ ಭಾರತ್ ರೈಲಿಗೆ ಅನುಕೂಲವಾಗುವಂತೆ ಯೋಜನೆ ಸಿದ್ಧಪಡಿಸುವಂತೆ ಸೂಚನೆ.
ಈ ಎಲ್ಲಾ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಬೇಕಾಗಿರುವ ಅಗತ್ಯ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಭವಿಷ್ಯದ ಅನೇಕ ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ಸಮಯದಲ್ಲಿ ಸೂಕ್ತ ಅನುದಾನ ಬಿಡುಗಡೆ ಮಾಡಿಸಲು ರೈಲ್ವೇ ಸಚಿವರ ಮನವೊಲಿಸುತ್ತೇನೆ ಎಂದು ಭರವಸೆ ನೀಡಿ, ಅಧಿಕಾರಿಗಳಿಗೆ ಅಗತ್ಯ ಕ್ರಮಕೈಗೊಳ್ಳಲು ಸಂಸದರು ಸೂಚನೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post