ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಕುಮಾರಿ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅವರ ಮೇಲೆ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದ್ದು, ಲಲಿತಮ್ಮ ಎಂಬ ಕಾಂಗ್ರೆಸ್ ಸದಸ್ಯೆ ಸ್ವಹಿತಾಸಕ್ತಿಯಿಂದ ಮೀಸಲಾತಿ ಬಗ್ಗೆ ನ್ಯಾಯಲಯದ ಮೆಟ್ಟಿಲು ಏರಿದ್ದರಿಂದ ಎರಡು ವರ್ಷದಿಂದ ಸಾಗರ ನಗರಸಭೆ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಸದಸ್ಯರೇ ಲಲಿತಮ್ಮ ಅವರ ನಡೆ ವಿರೋಧಿಸಿದ್ದರು ಎಂದು ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿ ದೇವಿ ಮಲ್ಲಪ್ಪ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಸಿದ್ದರಾಮಯ್ಯ #CM Siddaramaiah ರಾಜೀನಾಮೆ ಕೊಡಿಸಲು ಅನಿತಾಕುಮಾರಿ ಎಂದು ಹೇಳಿದರು.

Also read: ಅ.19 | ಋಗ್ವೇದ ಘನ ಪಾರಾಯಣ ಸಮಾರೋಪ | ನಗರದಲ್ಲಿ ಬೃಹತ್ ಶೋಭಾಯಾತ್ರೆ | ಘನಪಾಠಿಗಳಿಗೆ ಸನ್ಮಾನ
ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ನಮಗೆ ಮಹಿಳಾ ಮೀಸಲಾತಿ ಸಿಕ್ಕಿದೆ. 2008-09 ರಲ್ಲಿ ದೆಹಲಿಯಲ್ಲಿ ಮಹಿಳೆಯರಿಗೆ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಮಾಡಿದರೂ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರಲಿಲ್ಲ. ಕೊನೆಗೆ ಬಿಜೆಪಿ ಸರ್ಕಾರ ಮೀಸಲಾತಿ ಕೊಟ್ಟಿದೆ. ಮಹಿಳೆಯರು ಅಡುಗೆ ಮನೆಗೆ ಸೀಮಿತ ಅಲ್ಲ. ಆದರೆ ಈಗ ಮಹಿಳೆಯೇ ಮೀಸಲಾತಿಗೆ ತಡೆ ತಂದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಗರ ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ ಮಾತನಾಡಿ, ಒಂದು ವರ್ಷದ ನಂತರ ಆಡಳಿತಾಧಿಕಾರಿಗಳ ಅಧ್ಯಕ್ಷಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆದಿದೆ. ಸಭೆ ಆರಂಭದಲ್ಲಿ ಮೀಸಲಾತಿಗೆ ಲಲಿತಮ್ಮ ತಡೆ ಪಕ್ಷದ ನಿಲುವೇ? ವೈಯಕ್ತಿಕ ಹಿತಾಸಕ್ತಿಯೇ? ಎಂದು ಬಿಜೆಪಿ ಪ್ರಶ್ನಿಸಿದೆ. ಆಗ ಕಾಂಗ್ರೆಸ್ ಸದಸ್ಯರು ಅದು ವೈಯಕ್ತಿಕ ಹಿತಾಸಕ್ತಿ ಅಂತ ತಿಳಿಸಿದ್ದಾರೆ. ನಿಯಮಗಳ ಪ್ರಕಾರ ಸ್ವ ಹಿತಾಸಕ್ತಿ ಇರುವ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ. ಅದೇ ನಿಯಮದ ಅಡಿ ಸಭೆ ನಡೆಯುವಂತೆ ಆಗ್ರಹಿಸಿದ್ದೇವೆ. ಆದರೆ ಕಾಯಿದೆ ತಿಳಿಯದೇ ತಿರುಚುವ ಕೆಲಸ ಲಲಿತಮ್ಮ ಮಾಡಿದ್ದಾರೆ. ಅವರನ್ನು ಹೊರಗಿಟ್ಟು ಸಭೆ ನಡೆಸುವಂತೆ ಕೋರಲಾಗಿತ್ತು ಅಷ್ಟೇ ಎಂದು ವಿವರಿಸಿದರು.
ಸಾಗರದಲ್ಲಿ ನೂರು ಕೋಟಿ ರೂ. ಯುಜಿಡಿ ಕಾಮಗಾರಿ ಆಗಿದೆ ಎಂದು ಹಸ್ತಾಂತರ ಪ್ರಯತ್ನ ಸಭೆಯಲ್ಲಿ ನಡೆಯಿತು. ಇದನ್ನು ಚರ್ಚೆ ಮಾಡಲು ಬಿಜೆಪಿ ಮುಂದಾಗಿತ್ತು. ಆದರೆ ಶೇ.25 ರಷ್ಟು ಮಾತ್ರ ಕಾಮಗಾರಿ ಆಗಿರುವ ಹುನ್ನಾರ ಬಯಲಿಗೆ ಬರುತ್ತದೆ ಅಂತ ವಿಷಯ ಬದಲಾವಣೆ ಪ್ರಯತ್ನ ಮಾಡಿದ್ದಾರೆ. ಮಧ್ಯದಲ್ಲಿ ಜಾತಿ ತರುವ ಪ್ರಯತ್ನ ಮಾಡಿದ್ದಾರೆ. ಮಹಿಳೆಯರ ಹಕ್ಕು ಮೊಟಕು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್ಸಿ ಮೋರ್ಚಾ ಅಧ್ಯಕ್ಷ ರಾಮು ಕೋಹಳ್ಳಿ, ಮಾತನಾಡಿ, ಲಲಿತಮ್ಮ ಮೀಸಲಾತಿಗೆ ವೈಯಕ್ತಿಕ ಲಾಭಕ್ಕೆ ತಡೆ ತಂದಿದ್ದಾರೆ. ಹಾಗಾಗಿ ಅವರನ್ನು ಹೊರಗಿಟ್ಟು ಸಭೆ ನಡೆಸಲು ಒತ್ತಾಯಿಸಿದ್ದಾರೆ. ಇದಕ್ಕೆ ಮೇಘರಾಜ್ ದಲಿತ ವಿರೋ ಅಂತ ಬಿಂಬಿಸಲು ಯತ್ನ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಸಾಮಾನ್ಯ ಮಹಿಳೆ ಮೀಸಲಾತಿ ಅಡಿ ಲಲಿತಮ್ಮ ಕೂಡಾ ಅರ್ಹರು. ಈಗ ಆಡಳಿತಕ್ಕೆ ಅಡ್ಡಗಾಲು ಹಾಕಿದ್ದಾರೆ. ಇನ್ನೊಬ್ಬರ ತೇಜೋವಧೆ ಮಾಡಬಾರದು. ಇದನ್ನು ಇಲ್ಲಿಗೇ ನಿಲ್ಲಿಸಿ. ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುಮಲತಾ, ಸವಿತಾ ವಾಸು, ಮೈತ್ರಿ ಪಾಟೀಲ್ ಬಸವರಾಜ್, ದೊಡ್ಡಮ್ಮ, ಎಸ್ಟಿ ಮೋರ್ಚಾ ಅಧ್ಯಕ್ಷ ಹರೀಶ್, `ಧನರಾಜ್, ಮೂರ್ತಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post