ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಶ್ರೀ ಅಭಿನವ ಶಂಕರಭಾರತೀ ಮಹಾಸ್ವಾಮಿಗಳ #Shri Abhinava Shankarabharathi Swamiji ದ್ವಿತೀಯ ಚಾರ್ತುಮಾಸ್ಯದ ಅಂಗವಾಗಿ ಕೂಡಲಿಯಲ್ಲಿ #Koodli ನಡೆದ ಐತಿಹಾಸಿಕ ದಶಗ್ರಂಥಿ ಸಹಿತ ಸಂಪೂರ್ಣ ಋಗ್ವೇದ ಘನ ಪಾರಾಯಣದ ಸಮಾರೋಪ ಅ.19ರಂದು ನಡೆಯಲಿದೆ.
ಅಂದು ಮುಂಜಾನೆ 10 ಗಂಟೆಗೆ ಕಾಶಿ, ಪುಣೆ, ಭಾಗ್ಯನಗರ, ಶ್ರೀರಂಗಂ ಮುಂತಾದ ದೇಶದ ವಿವಿಧ ಭಾಗಗಳಿಂದ ಬರುವ ವೇದಾಭಿಮಾನಿ ಸಂಘ ಸಂಸ್ಥೆಗಳಿಂದ ಹಾಗೂ ವಿದ್ವಾಂಸರ ಉಪಸ್ಥಿತಿಯಲ್ಲಿ ಪಾರಾಯಣದ ಮಂಗಳ ಶ್ರೀ ಕ್ಷೇತ್ರ ಕೂಡಲಿ ಮೂಲ ಶಾರದಾಂಬಾ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಅಂದು ಸಂಜೆ 5 ಗಂಟೆಗೆ ಹಿಂದೂ ಸಮುದಾಯದ ಮೂವತ್ತಕ್ಕೂ ಅಧಿಕ ಸಂಘ ಸಂಸ್ಥೆಗಳ ವತಿಯಿಂದ ಕೋಟೆ ಗಾಯತ್ರಿ ದೇವಾಲಯದಿಂದ ಆರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಯತ್ರಿ ಮಾಂಗಲ್ಯ ಮಂದಿರದವರೆಗೂ ಬೃಹತ್ ಶೋಭಾ ಯಾತ್ರೆ ನಡೆಯಲಿದೆ.
Also read: ಅ.20 | ಬಾಗಲಕೋಟೆಯಲ್ಲಿ ಚಿಂತನ-ಮಂಥನ ಸಮಾವೇಶ | ಉದ್ದೇಶವೇನು? ಈಶ್ವರಪ್ಪ ಹೇಳಿದ್ದೇನು?
ಘನ ಪಾರಾಯಣ ಮಾಡಿದ ವಿದ್ವಾಂಸರಾದ ಶ್ರೀ ಚಂದ್ರಮೌಳಿ ಘನಪಾಠಿಗಳಿಗೆ ಸಂಜೆ 7 ಗಂಟೆಗೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ನಡೆಯಲಿರುವ ಸಭೆಯಲ್ಲಿ ಸನ್ಮಾನ ಮಾಡಲಾಗುತ್ತದೆ.
ಕೂಡಲಿ ಶೃಂಗೇರಿ ಮಠ #Koodli Shringeri Mutt 2 ನೇ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಹೆಬ್ಬಳ್ಳಿ ಶ್ರೀ ದತ್ತಾವಧೂತರು, ಶ್ರೀ ಗಣೇಶ್ವರ ಶಾಸ್ತ್ರಿ ದ್ರವಿಡ್ ಕಾಶಿ ಸೇರಿದಂತೆ ದೇಶದ ಪ್ರಮುಖ ವಿದ್ವಾಂಸರುಗಳು, ಶಿವಮೊಗ್ಗ ನಗರದ ಗಣ್ಯರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ದಶಗ್ರಂಥಿ ಸಹಿತ ಸಂಪೂರ್ಣ ಋಗ್ವೇದ ಘನ ಪಾರಾಯಣವು ಅ. 19ರ ಶನಿವಾರದಂದು ಮಂಗಳಗೊಳ್ಳಲಿದ್ದು ಅದರ ಅಂಗವಾಗಿ ಶ್ರೀ ಮಠದಲ್ಲಿ ಹಾಗೂ ಶಿವಮೊಗ್ಗ ನಗರದಲ್ಲಿ ಒಟ್ಟು ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಅ.17ರ ಗುರುವಾರ ಮುಂಜಾನೆ ಕೂಡಲಿಯ ಶ್ರೀ ಮೂಲ ಶಾರದಾಂಬಾ ದೇವಸ್ಥಾನದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿರುವ ಅಗ್ನಿಹೋತ್ರಿ ವಿದ್ವಾಂಸರರಿಂದ ಆಗ್ರಯಣೇಷ್ಟಿ, ಅ.18ರ ಶುಕ್ರವಾರ ಮುಂಜಾನೆ ಪೌರ್ಣಮಾಸ ಇಷ್ಟಿ ನಡೆಯಲಿದೆ.
ಇನ್ನು, ಕೂಡಲಿ ಶಾರದಾಂಬಾ ಸನ್ನಿಧಿಯಲ್ಲಿಯೇ ಅ.20ರಂದು ಮುಂಜಾನೆ 9 ಗಂಟೆಗೆ ಘನ ಪಾರಾಯಣದ ಸಮಾರೋಪದ ಅಂಗವಾಗಿ ರಾಷ್ಟ್ರ ಮಟ್ಟದ ವಿದ್ವತ್ ಸಭೆ ನಡೆಯಲಿದೆ.
ಕಾರ್ಯಕ್ರಮದ ಹೆಚ್ಚಿನ ವಿವರಗಳಿಗಾಗಿ 9731731154 ಸಂಖ್ಯೆಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post