ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀವಿಜಯ ಕಲಾನಿಕೇತನ ವತಿಯಿಂದ ಜು. 23, 24 ರಂದು ಸಂಜೆ 6 ಗಂಟೆಗೆ ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ಕಲಾ ಸಂಭ್ರಮ – 2022 ಕಾರ್ಯಕ್ರಮ ಆಯೋಜಿಸಲಾಗಿದೆ.
23ರ ಶನಿವಾರ ವಿದುಷಿ ಡಾ. ಕೆ.ಎಸ್. ಶುಭ್ರತಾರವರ ಶಿಷ್ಯರಿಂದ ಭರತನಾಟ್ಯ ಮಾರ್ಗ ಮತ್ತು ಯೋಗಾಚಾರ್ಯ ವಿದ್ವಾನ್ ಲಕ್ಷ್ಮೀನಾರಾಯಣ್ ಕೌಶಿಕ್ ಮತ್ತು ಅವರ ಶಿಷ್ಯರಿಂದ ಯೋಗ-ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದೆ.
24 ರ ಭಾನುವಾರ ಡಾ. ಕೆ.ಎಸ್. ಚೈತ್ರ ಮತ್ತು ಡಾ.. ಕೆ.ಎಸ್. ಶುಭ್ರತಾ ಅವರಿಂದ ‘ಭಕ್ತಿ ಸಿಂಚನ’ ಭರತನಾಟ್ಯ ಕಾರ್ಯಕ್ರಮ ಮತ್ತು ಜ್ಞಾನದೀಪ ವಿದ್ಯಾ ಸಂಸ್ಥೆಯ ಸಂಗೀತ ಶಿಕ್ಷಕಿ ವಿದ್ಯಾ ಅಮಿತ್‌ರವರಿಂದ ಭಕ್ತಿ ಸಂಗೀತ ಕಾರ್ಯಕ್ರಮವಿರುತ್ತದೆ.
Also read: ಪ್ರಸಕ್ತ ವರ್ಷವೇ ಕಬಿನಿ ಜಲಾಶಯ ಉದ್ಯಾನವನ ಕಾಮಗಾರಿ ಪ್ರಾರಂಭ: ಸಿಎಂ ಬೊಮ್ಮಾಯಿ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜ್ಞಾನದೀಪ ವಿದ್ಯಾಸಂಸ್ಥೆಯ ಚೇರ್‌ಮನ್ ತಲವಾನೆ ಪ್ರಕಾಶ್ ಮತ್ತು ರಂಗಾಯಣದ ಆಡಳಿತಾಧಿಕಾರಿಗಳಾದ ಡಾ. ಎ.ಸಿ. ಶೈಲಜಾ ಆಗಮಿಸಲಿದ್ದಾರೆ. ಟ್ರಸ್ಟ್‌ನ ಅಧ್ಯಕ್ಷ ಡಾ. ಕೆ.ಆರ್. ಶ್ರೀಧರ್ ಮತ್ತು ಲೇಖಕಿ ವಿಜಯಾ ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳಿಗೆ ಶ್ರೀವಿಜಯದ ನಿರ್ದೇಶಕಿ ಡಾ. ಕೆ.ಎಸ್. ಪವಿತ್ರಾ ಸ್ವಾಗತ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post