No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Wednesday, October 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಕನಸಿನ ಬೆನ್ನೇರಿ ಸಾಧನೆಯ ಶಿಖರವೇರಿದ ಡಾ. ಧನಂಜಯ ಸರ್ಜಿ…

kalpa News by kalpa News
June 16, 2022
in ಶಿವಮೊಗ್ಗ
0
ಕನಸಿನ ಬೆನ್ನೇರಿ ಸಾಧನೆಯ ಶಿಖರವೇರಿದ ಡಾ. ಧನಂಜಯ ಸರ್ಜಿ…
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಬಡವ, ಶ್ರೀಮಂತ ಎಂಬ ಬೇಧ ಭಾವವಿಲ್ಲದೇ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಉತ್ಕೃಷ್ಠ ಗುಣಮಟ್ಟದ ಸೇವೆಗೆ ಸರ್ಜಿ ಸೂಪರ್‌ ಸ್ಪೆಷಲಿಟಿ ಆಸ್ಪತ್ರೆ ಹೆಸರಾಗಿದ್ದು, ಮಲೆನಾಡಿನ ಮನೆ ಮಾತಾಗಿದೆ.

ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು 2014ರಲ್ಲಿ ಸಣ್ಣದಾಗಿ ಕ್ಲಿನಿಕ್‌ ಮಾದರಿಯಲ್ಲಿ ಶುಭಾರಂಭ ಮಾಡಲಾಗಿತು. ಆದರೆ ಇಂದು 256 ಬೆಡ್‌ಗಳವರೆಗೆ ತಲುಪಿದ್ದು ಪ್ರಸ್ತುತ ಆರೋಗ್ಯ ಕ್ಷೇತ್ರದ ಹೀರೋ ಆಗಿ ಬೆಳೆದು ನಿಂತಿದೆ.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ಡಾ. ಧನಂಜಯ ಸರ್ಜಿ ಅವರು ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಗೊಪ್ಪೇನಹಳ್ಳಿ ಗ್ರಾಮರಾದ ಅವರು ಸ್ವತಃ 62 ಬಾರಿ ರಕ್ತದಾನ ಮಾಡಿದ್ದಾರೆ. ಇವರ ಎಲ್ಲ ಸಾಧನೆಯ ಹಿಂದೆ ತಂದೆ ಸರ್ಜಿ ರುದ್ರಪ್ಪ, ತಾಯಿ ರೇಣುಕಾ, ಆಸ್ಪತ್ರೆಯ ನಿರ್ದೇಶಕರೂ ಆದ ಪತ್ನಿ ನಮಿತಾ ಅವರ ಎಲ್ಲ ರೀತಿಯ ಸಹಕಾರವಿದೆ.

ದಾವಣಗೆರೆ ಜೆಜೆಎಂ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದವರು. ಶಿಕ್ಷಣದ ಹಂತದಲ್ಲೇ ಜಿಲ್ಲೆಯ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕನಸು ಕಂಡವರು. ಆ ಕನಸೀಗ ಸಾಕಾರಗೊಂಡಿದೆ. 2007ರ ಮಾರ್ಚ್‌ 18ರಂದು ಶಿವಮೊಗ್ಗದಲ್ಲಿ ಸರ್ಜಿ ಚೈಲ್ಡ್ ಕೇರ್‌ ಸೆಂಟರ್‌ ಮೂಲಕ ಸೇವೆ ಆರಂಭಿಸಲಾಯಿತು. 2014ರಂದು ಜೀರೋ ಹಾಸಿಗೆಯಿಂದ ಶುಭಾರಂಭಗೊಂಡ ಆಸ್ಪತ್ರೆ ಕೇವಲ 9 ವರ್ಷದಲ್ಲಿ 256 ಬೆಡ್‌ವರೆಗೂ ತಲುಪಿರುವುದು ಸಾಧನೆ ಹಾಗೂ ಉತ್ತಮ ಗುಣಮಟ್ಟದ ಸೇವೆಗೆ ನಿದರ್ಶನವಾಗಿದೆ.

ರಾಜ್ಯದ ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಶಿರಸಿ, ಚಿಕ್ಕಮಗಳೂರು, ಹಾಸನ, ಅರಸೀಕೆರೆ ಹಾಗೂ ತುಮಕೂರು, ಬೆಂಗಳೂರು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆ ಪಡೆಯಲು ನಿತ್ಯವೂ ನೂರಾರು ರೋಗಿಗಳು ಬರುತ್ತಿದ್ದಾರೆ. ಒಟ್ಟು 75 ಐಸಿಯು ಬೆಡ್‌ಗಳು, 9 ಆಪರೇಷನ್‌ ಥಿಯೇಟರ್‌ಗಳ ಸೌಲಭ್ಯ ಇದೆ. ಎರಡೂ ಸರ್ಜಿ ಆಸ್ಪತ್ರೆ ಸೇರಿ ವರ್ಷಕ್ಕೆ ಎರಡು ಲಕ್ಷ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನಕ್ಕೆ ಸರಾಸರಿ 500ರಿಂದ 750 ರೋಗಿಗಳನ್ನು ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ವರ್ಷದಲ್ಲಿ1800ರಿಂದ 2000 ವರೆಗೆ ಹೆರಿಗೆ ಆಗುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸಾಮಾಜಿಕ ಕಳಕಳಿ ಹೊಂದಿರುವ ಸರ್ಜಿ ಆಸ್ಪತ್ರೆಯ ನಿರ್ದೇಶಕ ಧನಂಜಯ ಸರ್ಜಿ ಅವರು ವೈದ್ಯಕೀಯ ವೃತ್ತಿ ಜೊತೆಗೆ ನಿರ್ವಹಿಸುತ್ತಿರುವ ಮಾನವೀಯ ಕಾರ್ಯಗಳು ಹೀಗಿವೆ.

  • ರೌಂಡ್‌ ಟೇಬಲ್‌ ಸಂಸ್ಥೆ ಜತೆಗೂಡಿ ಶಿವಮೊಗ್ಗದಲ್ಲಿ 2019 ರಲ್ಲಿ ಮಹಾಮಳೆ ಸಂದರ್ಭ 1200 ಮಂದಿಗೆ ಟೈಪಾಯಿಡ್‌ ಲಸಿಕೆ,
  • ಸ್ವತಃ ಡಾ.ಧನಂಜಯ ಸರ್ಜಿ ಅವರು 62 ಬಾರಿ ರಕ್ತದಾನ ಮಾಡಿದ್ದಾರೆ.
  • ಪ್ರತಿ ತಿಂಗಳು 1.50 ಲಕ್ಷ ರೂ.ವೆಚ್ಚದಲ್ಲಿ 160 ವಿಶೇಷಚೇತನ ಮಕ್ಕಳ ಆರೈಕೆ,
  • ಶಿವಮೊಗ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ನವಜಾತ ಶಿಶುಗಳ ಐಸಿಯು ಘಟಕ ಸ್ಥಾಪನೆ.
  • ಖಾಸಗಿ ಕ್ಷೇತ್ರದಲ್ಲಿ ಕೋವಿಡ್‌ ಸಂದರ್ಭ ಮಂದಿಗೆ ಕೊರೊನಾ ಲಸಿಕೆ,
  • ಆಯುಷ್ಮಾನ್‌ ಭಾರತ್‌ ಯೋಜನೆ ಅಡಿ 1400 ಮಕ್ಕಳಿಗೆ ಚಿಕಿತ್ಸೆ.

ಬಂಜೆತನ ನಿವಾರಣಾ ಕೇಂದ್ರ
ಬಂಜೆತನ ನಿವಾರಣೆಯಿಂದ ಹಿಡಿದು ಭ್ರೂಣ ಹಂತದಲ್ಲಿರುವ ಶಿಶುವಿನಿಂದ ಹಿಡಿದು ಹಿರಿಯ ವಯಸ್ಕರವರೆಗೂ ಸರ್ವ ರೀತಿಯ ಆರೋಗ್ಯ ಸೇವೆ ಸರ್ಜಿಯಲ್ಲಿ ಲಭ್ಯ. ಐವಿಎಫ್‌ ಸೆಂಟರ್‌ (ಬಂಜೆತನ ನಿವಾರಣಾ ಕೇಂದ್ರ) ಶೀಘ್ರವೇ ಆರಂಭವಾಗಿದೆ. ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲ ವಿಭಾಗದಲ್ಲಿ ಒಟ್ಟು 50 ಕನ್ಸಲ್ಟೆಂಟ್‌ ವೈದ್ಯರು ಇದ್ದಾರೆ.

ಮತ್ತೊಂದು ವಿಶೇಷವೆಂದರೆ 12 ಭಾಷೆಗಳಲ್ಲಿ ಔಷಧ ಚೀಟಿ ಸೌಲಭ್ಯವಿದೆ. ಜಿಲ್ಲೆಯ ಆರೋಗ್ಯ ಕ್ಷೇತ್ರದ ಇತಿಹಾಸದಲ್ಲೇ ಇಷ್ಟು ವೇಗವಾಗಿ ಅಭಿವೃದ್ಧಿಗೊಂಡ ಶ್ರೇಯಸ್ಸು ಸರ್ಜಿ ಆಸ್ಪತ್ರೆಗೆ ಸಲ್ಲುತ್ತದೆ.
2 ಲಕ್ಷ ಒಪಿಡಿ ತಪಾಸಣೆ
ವರ್ಷಕ್ಕೆ 2ಲಕ್ಷ ಮಂದಿಯ ಒಪಿಡಿ ತಪಾಸಣೆ ಮಾಡುವ ಮೂಲಕ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲೇ ನಂ 1 ಆಗಿ ಸರ್ಜಿ ಆಸ್ಪತ್ರೆ ಬೆಳೆದು ನಿಂತಿದೆ.

Also read: ಮಳೆಗಾಲ ಆರಂಭಕ್ಕೂ ಮುನ್ನವೇ ಮುಂಜಾಗ್ರತೆ ವಹಿಸಿ: ಶಾಸಕ ಹಾಲಪ್ಪ ಸೂಚನೆ

ಜಿಲ್ಲಾಡಳಿತ ಹಾಗೂ ಬಿ.ಎಸ್‌. ಯಡಿಯೂರಪ್ಪ ಶ್ಲಾಘನೆ
2020 ಏಪ್ರಿಲ್‌ನಲ್ಲಿ ಹಿಂದೆ ನಗರದ ಮೆಗ್ಗಾನ್‌ ಆಸ್ಪತ್ರೆಯ ಮಕ್ಕಳ ಐಸಿಯು ವಿಭಾಗದಲ್ಲಿ ಶಾರ್ಟ್‌ ಸಕ್ರ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡ ಸಂದರ್ಭ ನವಜಾತ 33 ಮಕ್ಕಳನ್ನೂ ಸರ್ಜಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಈ ಸಂದರ್ಭ ಸರ್ಜಿ ಆಸ್ಪತ್ರೆ ತೀವ್ರ ನಿಗಾ ವಹಿಸಿ ಆರೈಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರಶಂಸಾ ಪತ್ರ ನೀಡುವ ಮೂಲಕ ಸೇವೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದೆ. ಹಾಗೆಯೇ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌ ಯಡಿಯೂರಪ್ಪ ಅವರು ದೂರವಾಣಿ ಕರೆ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದರು.

ಆಟೊ ಚಾಲಕರಿಗೆ ಹೆಲ್ತ್ ಕಾರ್ಡ್‌
ಆಯುಷ್ಮಾನ್‌ ಭಾರತ್‌ ಯೋಜನೆ ಅಡಿ ಸಾವಿರಾರು ಮಕ್ಕಳಿಗೆ ಚಿಕಿತ್ಸಾ ಸೌಲಭ್ಯ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ 2500 ಮಂದಿ ಆಟೊ ಚಾಲಕರಿಗೆ ಸರ್ಜಿ ಆಸ್ಪತ್ರೆಯಿಂದ ಹೆಲ್ತ್ ಕಾರ್ಡ್‌ಗಳನ್ನು ಉಚಿತವಾಗಿ ನೀಡಲು ಚಾಲನೆ ಕೊಡಲಾಗಿದೆ. ಪ್ರತಿ ತಿಂಗಳು ಉಚಿತ ಆರೋಗ್ಯ ಅರಿವು ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ.

ಕೊರೊನಾ ಕೈ ಮೀರಿದಾಗ ಯುನಿಟಿ ಆಸ್ಪತ್ರೆ ಸಹಯೋಗದಲ್ಲಿ ಸಾವಿರಾರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಹಾಗೆಯೇ 1500 ಆಶಾ ಕಾರ್ತೆಯರಿಗೆ ಹೆಲ್ತ್ ಕಾರ್ಡ್‌ ವಿತರಿಸಲಾಗಿದೆ.

ಸಾಮಾಜಿಕ ಕಳಕಳಿ ಹೊಂದಿರುವ ಡಾ. ಧನಂಜಯ ಸರ್ಜಿ ಅವರು 2016ರಲ್ಲಿ ಮಕ್ಕಳ ದಿನಾಚರಣೆ ಸಂದರ್ಭ 160 ವಿಶೇಷಚೇತನ ಹಾಗೂ ಅನಾಥ ಮಕ್ಕಳನ್ನು ಆರೋಗ್ಯಕ್ಕೆ ಸಂಬಂಸಿದಂತೆ ದತ್ತು ಪಡೆದಿದ್ದಾರೆ. ಇತ್ತೀಚೆಗೆ ಸರ್ಜಿ ಫೌಂಡೇಷನ್‌ ಎಂಬ ದತ್ತು ಸಂಸ್ಥೆಯನ್ನು ಆರಂಭಿಸಿದ್ದಾರೆ. ಅಲ್ಲದೇ ಕಳೆದ ಎರಡು ವರ್ಷದ ಮಹಾಮಳೆಯ ಪ್ರವಾಹ ಸಂದರ್ಭ ರೌಂಡ್‌ಟೇಬಲ್‌ ಸಹಾಯದೊಂದಿಗೆ 2 ಸಾವಿರ ಮಕ್ಕಳಿಗೆ ಉಚಿತವಾಗಿ ಟೈಫಾಯಿಡ್‌ ವ್ಯಾಕ್ಸಿನೇಷನ್‌ ನೀಡಿರುವುದು ವಿಶೇಷವಾಗಿದೆ.

ಉಚಿತ ಹಾಸ್ಟೆಲ್‌ ಸೌಲಭ್ಯ
ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಸರ್ಜಿ ಉಚಿತ ಹಾಸ್ಟೆಲ್‌. ಈ ಹಾಸ್ಟೆಲ್‌ನಲ್ಲಿ ಒಟ್ಟು 270 ರಿಂದ 300 ಮಂದಿಗೆ ಉಚಿತವಾಗಿ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತೊಂದು ವಿಶೇಷವೆಂದರೆ ಸರ್ಜಿ ಸಮೂಹ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಸುಮಾರು 1200 ಮಂದಿಗೆ ನಿತ್ಯವೂ ಉಚಿತವಾಗಿ ಊಟ, ಉಪಹಾರದ ವ್ಯವಸ್ಥೆ ಮಾಡಿದ್ದು, ಅವರ ಅನ್ನ ದಾಸೋಹಕ್ಕೆ ಸಾಕ್ಷಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: ಶಿವಮೊಗ್ಗ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಳೆಗಾಲ ಆರಂಭಕ್ಕೂ ಮುನ್ನವೇ ಮುಂಜಾಗ್ರತೆ ವಹಿಸಿ: ಶಾಸಕ ಹಾಲಪ್ಪ ಸೂಚನೆ

Next Post

ಪ್ರಧಾನಿ ಮೋದಿ ಆಡಳಿತ 8 ವರ್ಷ ಪೂರ್ಣ: ಬಂಟ್ವಾಳದಲ್ಲಿ ಅರ್ಥಪೂರ್ಣ ಸಂಭ್ರಮಾಚರಣೆ ಹೇಗಿತ್ತು ನೋಡಿ

kalpa News

kalpa News

Next Post
ಪ್ರಧಾನಿ ಮೋದಿ ಆಡಳಿತ 8 ವರ್ಷ ಪೂರ್ಣ: ಬಂಟ್ವಾಳದಲ್ಲಿ ಅರ್ಥಪೂರ್ಣ ಸಂಭ್ರಮಾಚರಣೆ ಹೇಗಿತ್ತು ನೋಡಿ

ಪ್ರಧಾನಿ ಮೋದಿ ಆಡಳಿತ 8 ವರ್ಷ ಪೂರ್ಣ: ಬಂಟ್ವಾಳದಲ್ಲಿ ಅರ್ಥಪೂರ್ಣ ಸಂಭ್ರಮಾಚರಣೆ ಹೇಗಿತ್ತು ನೋಡಿ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL