ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಇಂದು ಮುಂಜಾನೆ ಪ್ರಿಯದರ್ಶಿನಿ ಶಾಲೆಯ ಸಮೀಪ ಇಬ್ಬರು ವ್ಯಕ್ತಿಗಳಿಂದ ಪತ್ರಿಕಾ ವಿತರಕನ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.

ಪ್ರಕರಣದ ವಿವರ :
ಪತ್ರಿಕೆ ಹಂಚುವ ಯುವಕನೋರ್ವ ಪ್ರತಿನಿತ್ಯದಂತೆ ಇಂದು ಬೆಳಗ್ಗೆ ಪೇಪರ್ ಹಾಕಿ ವಾಪಾಸಾಗುತ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಅನಾವಶ್ಯಕವಾಗಿ ಮಾತಿನ ಚಕಮಕಿ ನಡೆಸಿ, ಯುವಕನನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಹಲ್ಲೆಗೊಳಗಾದ ಯುವಕನ ಕೈಗೆ ಸಣ್ಣ ಪ್ರಮಾಣದ ಹೊಡೆತ ಬಿದ್ದಿದೆ ಎನ್ನಲಾಗಿದೆ. ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಅಲ್ಲಿನ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















