ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿ.ವೈ. ರಾಘವೇಂದ್ರ #B Y Raghavendra ಅವರದು ‘ಕುಲಘಾತುಕ’ ಸಂಸ್ಕøತಿ ಎಂದು ಕೆಪಿಸಿಸಿ ವಕ್ತಾರ ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ #Ayanuru Manjunath ವಾಗ್ದಾಳಿ ನಡೆಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಘವೇಂದ್ರ ಅವರು ಮಧು ಬಂಗಾರಪ್ಪ ಅವರಿಗೆ ಸಂಸ್ಕøತಿಯೇ ಇಲ್ಲ ಎಂದು ಟೀಕಿಸಿದ್ದಾರೆ. ಇವರಿಗೆ ಯಾವ ಸಂಸ್ಕøತಿ ಇದೆ. ಈಶ್ವರಪ್ಪ #Eshwarappa ಅವರು ಯಡಿಯೂರಪ್ಪನವರ ಬಗ್ಗೆ ಅಶ್ಲೀಲ ಅಪಾರ್ಥವಾಗಿ ಮಾತನಾಡಿದ್ದರೂ ಕೂಡ ಅವರ ಚಾರಿತ್ರ್ಯವಧೆ ಮಾಡಿದ್ದರೂ ಕೂಡ ತಂದೆಗೆ ಆದ ಅವಮಾನವನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡ ರಾಘವೇಂದ್ರ ಅವರದ್ದು ಯಾವ ಸಂಸ್ಕøತಿ ಎಂದು ಪ್ರಶ್ನೆ ಮಾಡಿದರು.

Also read: ಸೊರಬ: ಪುರಾಣ ಪ್ರಸಿದ್ಧ ಶ್ರೀ ರಂಗನಾಥ ಸ್ವಾಮಿ ದೇಗುಲಕ್ಕೆ ಸಂಸದ ರಾಘವೇಂದ್ರ ದಂಪತಿ ಭೇಟಿ
ತಂದೆ ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣ ಯಾರು? ಚೆಕ್ ನಲ್ಲಿ ಹಣ ತೆಗೆದುಕೊಂಡು ಚೋಟಾ ಸಹಿ ಹಾಕಿದವರು ಯಾರು? ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ ಕುಲಘಾತುಕರು ಇವರು. ಇವರದು ಯಾವ ಸಂಸ್ಕøತಿ. ಯಾವ ಸಂತಾನ ಎಂದು ವಾಗ್ದಾಳಿ ನಡೆಸಿದರು.

ಬಂಗಾರಪ್ಪನವರ #Bangarappa ಸಾಧನೆ ಬಗ್ಗೆ ಅವರು ಮಾತನಾಡುವುದು ತರವಲ್ಲ. ಪಂಪ್ ಸೆಟ್ ಕರೆಂಟ್ ಕೊಟ್ಟಿದ್ದು ಬಂಗಾರಪ್ಪನವರೇ. ನಾವು ಕೊಟ್ಟಿದ್ದು ಎಂದು ಹೇಳುವುದೇಕೆ. ಮುಂದುವರೆಸಿದ್ದೇವೆ ಎನ್ನಲಿ. ಹಾಗೆಯೇ ವಿಮಾನ ನಿಲ್ದಾಣ ಸ್ಥಾಪನೆ. ರಸ್ತೆಗಳ ಅಭಿವೃದ್ಧಿ ಇವೆಲ್ಲವೂ ಕಾಂಗ್ರೆಸ್ ಆಡಳಿತದ ಕಾಲದಲ್ಲಿಯೂ ನಡೆದಿದ್ದವು. ಇವರ ರಸ್ತೆಗಳು, ರಿಂಗ್ ರೋಡ್, ಬೈಪಾಸ್ ರಸ್ತೆಗಳು ಎಲ್ಲಿಗೆ ಹೋಗಿ ಎಲ್ಲಿ ಸೇರಿವೆ. ಏಕೆ ಎಂದು ಅವರೇ ಉತ್ತರ ಹೇಳಲಿ. ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರು ಬಹಿರಂಗ ಚರ್ಚೆಗೆ ಕರೆದಿದ್ದಾರೆ. ಚರ್ಚೆಗೆ ಬರುವಷ್ಟು ಪುರುಸೊತ್ತು ಅವರಿಗೆ ಇದೆಯಾ? ನಾವಂತೂ ರೆಡಿ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾಕರ್, ವೈ.ಹೆಚ್. ನಾಗರಾಜ್, ಜಿ.ಡಿ. ಮಂಜುನಾಥ್, ಕಲೀಂ ಪಾಶ, ಇಕ್ಕೇರಿ ರಮೇಶ್, ಶಾಂತವೀರ ನಾಯ್ಕ್, ಜಿ. ಪದ್ಮನಾಭ್, ಶಿ.ಜು. ಪಾಶ, ಶಿವಾನಂದ್, ಹಿರಣ್ಣಯ್ಯ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post