ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಡುರಾತ್ರಿಯಲ್ಲಿ ಬೈಕ್’ನಲ್ಲಿ ಡ್ರಾಪ್ ಪಡೆದ ತೃತೀಯ ಲಿಂಗಿಯೊಬ್ಬಳು ಸವಾರನ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿರುವ ಘಟನೆ ನಗರದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಖಾಸಗಿ ಕಂಪೆನಿಯ ಉದ್ಯೋಗಿಯೊಬ್ಬರು ರಾತ್ರಿ 11.30ರ ವೇಳೆಗೆ ಬಸ್ ನಿಲ್ದಾಣಕ್ಕೆ ಆಗಮಿಸಿ ಊಟ ಮುಗಿಸಿ ತನ್ನ ರೂಂಗೆ ತೆರಳುತ್ತಿದ್ದರು. ಈ ವೇಳೆ ಅಲ್ಲಿಯೇ ನಿಂತಿದ್ದ ಮಂಗಳಮುಖಿಯಂತಿದ್ದ ಒಬ್ಬಳು ತನಗೆ ಮೆಗ್ಗಾನ್ ಆಸ್ಪತ್ರೆಗೆ ಡ್ರಾಪ್ ನೀಡುವಂತೆ ಮನವಿ ಮಾಡಿದ್ದಾಳೆ.
ವ್ಯಕ್ತಿಯೂ ಸಹ ಅದೇ ಮಾರ್ಗದಲ್ಲಿ ತೆರಳಬೇಕಿದ್ದ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಯ ಉದ್ಯೋಗಿ ತೃತೀಯ ಲಿಂಗಿಯನ್ನು ಬೈಕ್’ಗೆ ಹತ್ತಿಸಿಕೊಂಡಿದ್ದಾರೆ.
ಮೆಗ್ಗಾನ್ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ತೃತೀಯ ಲಿಂಗಿ ಬೈಕ್ ಸವಾರನ ಮೈ ಮುಟ್ಟಲು ಶುರು ಮಾಡಿದ್ದಳು. ಬೈಕ್ ಸವಾರ ಇದನ್ನು ವಿರೋಧಿಸಿದ್ದಾರೆ.
Also read: ಭದ್ರಾವತಿ | ಐತಿಹಾಸಿಕ ಪ್ರಸಿದ್ಧ ಲಕ್ಷ್ಮಿನರಸಿಂಹ ದೇಗುಲ ದುರಸ್ಥಿಗೆ ಒತ್ತಾಯ
ಮೆಗ್ಗಾನ್ ಆಸ್ಪತ್ರೆಯಲ್ಲಿ ಡ್ರಾಪ್ ನೀಡಿ ರೂಮ್’ಗೆ ತೆರಳಿ ಬಟ್ಟೆ ಬದಲಿಸುವಾಗ ಕೊರಳಲ್ಲಿದ್ದ ಚೈನ್ ನಾಪತ್ತೆ ಆಗಿರುವುದು ಅರಿವಿಗೆ ಬಂದಿದೆ. ಒಂದೂವರೆ ತಿಂಗಳು ತೃತೀಯ ಲಿಂಗಿಗಾಗಿ ಎಲ್ಲೆಡೆ ಹುಡುಕಿದರೂ ಆಕೆ ಪತ್ತೆಯಾಗಿರಲಿಲ್ಲ. ಅಲ್ಲದೆ ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post