ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ S Bangarappa ಅವರ ಕೂಲಿಂಗ್ ಗ್ಲಾಸಿನ ಹಿಂದೆ ಬಡವರಿಗೆ ಸೂರು ಕಲ್ಪಿಸುವ ಕನಸು ಹೊಂದಿದ್ದರು ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ Minister Madhu Bangarappa ಹೇಳಿದರು.
ಅವರು ಇಂದು ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಗೆ ಮಹಾನಗರ ಪಾಲಿಕೆಯಿಂದ ದಿ.ಶ್ರೀ ಎಸ್.ಬಂಗಾರಪ್ಪ ಬಡಾವಣೆಯ ನಾಮಕರಣ ಸಮಾರಂಭ ಹಾಗೂ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ (ಹಂತ-2) ಹಾಗೂ ಎನ್.ಜಿ.ಟಿ.ಅನುದಾನದ ಕಾಮಗಾರಿಗಳ 127 ಕೋ.ರೂ.ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
2016ರಿಂದಲೇ ಈ ಆಶ್ರಯ ಬಡಾವಣೆಗೆ ಬಂಗಾರಪ್ಪ ಬಡಾವಣೆ ಎಂದು ನಾಮಕರಣ ಮಾಡಬೇಕು ಎಂಬ ಬೇಡಿಕೆ ಇತ್ತು. ಇಂದು ಅದು ನೆರವೇರಿದ್ದು ಸಂತಸ ತಂದಿದೆ. ಬಂಗಾರಪ್ಪನವರು ಸೊರಬ ಕ್ಷೇತ್ರದಿಂದ ಆಯ್ಕೆ ಆದರೂ ಅವರ ಜನಪರ ಯೋಜನೆಗಳಾದ ಆಶ್ರಯ, ಆರಾಧನಾ, ಭಾಗ್ಯಜ್ಯೋತಿ, ಗ್ರಾಮೀಣ ಕೃಪಾಂಕಗಳ ಮೂಲ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದ ಅವರು, ಬಂಗಾರಪ್ಪ ಅವರ ಕನಸಿನ ಆಶ್ರಯ ಬಡಾವಣೆ ಇಂದು ಬೊಮ್ಮನಕಟ್ಟೆಯಲ್ಲಿ ತಲೆ ಎತ್ತಿ ನಿಂತಿದೆ. 4000 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಶ್ರಯತಾಣವಾಗಿದೆ ಎಂದರು.
ಶಿವಮೊಗ್ಗ ದೊಡ್ಡದಾಗಿ ಬೆಳೆದಿದೆ. ಜನಸಂಖ್ಯೆ ಹೆಚ್ವುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯೋಜನಾಬದ್ಧ ಪ್ರಸ್ತಾವನೆಯನ್ನು ವಿರೋಧ ಪಕ್ಷದವರ ಸಲಹೆ ಪಡೆದು ಪಾಲಿಕೆಯಿಂದ ಕಳಿಸಿಕೊಡುತ್ತೇವೆ. ಅದಕ್ಕೆ ಸರ್ಕಾರದಿಂದ ಆದಷ್ಟು ಬೇಗ ಮಂಜೂರು ಮಾಡಿಕೊಡಬೇಕು ಎಂದು ನಗರಾಭಿವೃದ್ಧಿ ಸಚಿವರನ್ನು ಕೋರಿಕೊಂಡರು.
ಶಾಸಕ ಡಿ.ಎಸ್.ಅರುಣ್ ಮಾತನಾಡಿ, ಶಿವಮೊಗ್ಗ ನಗರ ದಿನದಿಂದ ಬೆಳೆಯುತ್ತಿದೆ.ಇಂದು ನಾಲ್ಕು ಲಕ್ಷ ಜನಸಂಖ್ಯೆ ಮೀರಿದೆ. ಮುಂದಿನ 25 ವರ್ಷಗಳ ಯೋಜನೆಯನ್ನು ರೂಪಿಸಿ ಅದಕ್ಕೆ ಸರ್ಕಾರ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಬಂಗಾರಪ್ಪನವರ ಮುತ್ಸದ್ದಿತನ ಬಣ್ಣಿಸಲಸಾಧ್ಯ. ಈ ಹಿಂದೆ ಇದ್ದಂತಹ ಆಶ್ರಯ ಬಡಾವಣೆ ಇಂದು ಬದಲಾಗಿದೆ. ಎಲ್ಲದನ್ನೂ ಹೋರಾಟ ಮಾಡಿಯೇ ತೆಗೆದುಕೊಳ್ಳಬೇಕಾಗಿದೆ. ಮಧು ಬಂಗಾರಪ್ಪ ಅವರು ದೇವಸ್ಥಾನಗಳಲ್ಲಿ ಪೂಜೆ ಇಲ್ಲದಿದಗದರೂ ಶಾಲೆಗಳಲ್ಲಿ ಪೂಜೆ ಅಸಗಬೇಕು ಎನ್ನುತ್ತಾರೆ. ಆದರೆ ಬಂಗಾರಪ್ಪ ಅವರು ದೇವಸ್ಥಾನಗಳ್ಲಿ ಪೂಜೆ ನಡೆಯಬೇಕು ಎಂದಿದ್ದರು.
ಸಚಿವ ಬೈರತಿ ಸುರೇಶ ಅವರು ನಮ್ಮ ಬೇಡಿಕೆಗೂ ಮೊದಲೇ ಅನುದಾನ ಕೊಡುತ್ತಾರೆ ಎಂಬ ಆಶಾಭಾವನೆ ಹೊಂದಿದ್ದೇವೆ. ಯಡಿಯೂರಪ್ಪ ಅವರು 490 ಕೋ.ರೂ.ಯೋಜನೆ ರೂಪಿಸಿದ್ದೇವೆ. ಸಚಿವರಿಗೆ ಆ ಪ್ರಸ್ತಾವನೆಯನ್ನು ನೀಡಿದ್ದೇನೆ. ಪೌರ ಕಾರ್ಮಿಕರಿಗೆ ವಸತಿ ಭಾಗ್ಯ ಯೋಜನೆಗೆ 27 ಕೋಟಿ ರೂ.ಕೊಡಬೇಕು ಎಂದು ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











