ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2022 ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಶಿವಮೊಗ್ಗದ ಪ್ರತಿಷ್ಠಿತ ಆಭರಣಗಳ ಮಳಿಗೆ ಮೈತ್ರಿ ಮೈ ಜುವೆಲ್ಸ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನುಮದಿನದ ಅಂಗವಾಗಿ ಆಚರಿಸಲಾಗುವ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ, ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಗೌರವಿಸಲಾಯಿತು.
ಹೊಸನಗರ ಗೌಡಕೊಪ್ಪ ಸ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕರಾದ ಅಂಬಿಕಾ, ಶಿವಮೊಗ್ಗ ಆಲ್ಕೊಳ ಸ.ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರಾದ ಕೆಂಡಪ್ಪ, ಭದ್ರಾವತಿ ಹಳೆ ನಗರದ ಸ.ಉ.ಕಿ.ಪ್ರಾ.ಶಾಲೆಯ ಕೋಕಿಲಾ, ಶಿವಮೊಗ್ಗದ ಹುಬ್ಬನಹಳ್ಳಿ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಎ.ಆರ್. ಶಿವಕುಮಾರ್, ಶಿವಮೊಗ್ಗದ ಪಿಳ್ಳಂಗೆರೆ ಸ.ಪ್ರೌ.ಶಾಲೆಯ ಸಹ ಶಿಕ್ಷಕರಾದ ಗಂಗಾನಾಯ್ಕ್, ಭದ್ರಾವತಿ ಅರಹತೊಳಲು ಸ.ಪ್ರೌ.ಶಾಲೆಯ ಸಹ ಶಿಕ್ಷಕರಾದ ಅಣ್ಣಪ್ಪ, ಶಿವಮೊಗ್ಗ ಕಡ್ಲೆಒಡ್ಡು ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಸುನಿತಾ, ಶಿವಮೊಗ್ಗದ ಹಾಡೋನಹಳ್ಳಿ ವೆಂಕಟೇಶ್ವರ ಪ್ರೌ.ಶಾಲೆಯ ಸಹ ಶಿಕ್ಷಕರಾದ ಶಿವನಾಯ್ಕ್, ಶಿಕಾರಿಪುರದ ಕೆ.ಹೆಚ್. ಮೊಹಲ್ಲಾದ ಸ.ಉ.ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಅಜೀಜ್ ಉನ್ನಿಸ್ಸಾ, ಸೊರಬದ ಬೆನ್ನೂರಿನ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಶಮೀಂ ತಾಜ್ ಇವರನ್ನು ಮೈತ್ರಿ ಮೈ ಜುವೆಲ್ಸ್ ನಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
Also read: ಮುಗ್ದ ಮನಸ್ಸಿನ ಮಕ್ಕಳು ದೇಶದ ಸತ್ಪçಜೆಗಳಾಗಲು ಶಿಕ್ಷಕರು ಏಣಿಯಾಗಲಿ: ಶ್ರೀಪತಿ
ಈ ಸಂದರ್ಭದಲ್ಲಿ ಸಂಸ್ಥೆಯ ಸಿ.ಇ.ಓ. ಸೆಂಥಿಲ್ ವೇಲನ್, ಸಂಸ್ಥೆಯ ನಿರ್ದೇಶಕಿ ಅನಿತಾ ಸೆಂಥಿಲ್, ಶಿಕ್ಷಕಿ ರಾಧಿಕಾ ಸೇರಿದಂತೆ, ಸಿಬ್ಭಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post