ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರದ ಜನ್ನಾಪುರದ ಸೇರಿದಂತೆ ವಿವಿಧೆಡೆ ಸಿಮೆಂಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಇಂದು ಗುದ್ದಲಿ ಪೂಜೆ ನೆರವೇರಿಸಿದರು.
1.70 ಕೋಟಿ ರೂ. ವೆಚ್ಚದಲ್ಲಿ ಜನ್ನಾಪುರ ಜಯಶ್ರೀ ವೃತ್ತದಿಂದ ಗಣಪತಿ ದೇವಸ್ಥಾನದವರೆಗೆ ಮತ್ತು 1.84 ಕೋಟಿ ರೂ. ವೆಚ್ಚದಲ್ಲಿ ಜನ್ನಾಪುರ ಮಹಾಗಣಪತಿ ದೇವಸ್ಥಾನದಿಂದ ಶ್ರೀ ಮಲ್ಲೇಶ್ವರ ಸಮುದಾಯ ಭವನ ಸಮೀಪದ ಶ್ರೀ ಈಶ್ವರ ದೇವಸ್ಥಾನದವರೆಗೆ ಸಿಮೆಂಟ್ ರಸ್ತೆ ನಿರ್ಮಾಣ, 53 ಲಕ್ಷ ರೂ. ವೆಚ್ಚದಲ್ಲಿ ವೆಲೂರುಶೆಡ್‌ನಿಂದ ಜಿಂಕ್‌ಲೈನ್‌ವರೆಗೆ ಸಿವೆಂಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಹಾಗೂ 13 ಲಕ್ಷ ರೂ. ವೆಚ್ಚದಲ್ಲಿ ಮಹಾಗಣಪತಿ ದೇವಸ್ಥಾನದಿಂದ ಬಸವೇಶ್ವರ ಶಾಲೆವರೆಗೆ ಸಿಮೆಂಟ್ ರಸ್ತೆ ನಿರ್ಮಾಣ ಹಾಗೂ 68 ಲಕ್ಷ ರೂ. ವೆಚ್ಚದಲ್ಲಿ ಜನ್ನಾಪುರ ಕೆಸಿ ಬ್ಲಾಕ್‌ನಿಂದ ಹಾಲಪ್ಪಶೆಡ್‌ವರೆಗೆ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಪೌರಾಯುಕ್ತ ಮನೋಹರ್, ಮುಖಂಡರಾದ ಬಾಲಕೃಷ್ಣ, ಲೋಕೇಶ್, ಚನ್ನಪ್ಪ, ಕಾಂತರಾಜ್, ಆರ್. ವೇಣುಗೋಪಾಲ್, ಆಟೋ ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















