ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶೀಘ್ರದಲ್ಲೇ ನಾಲೆಗೆ ತಡೆಗೋಡೆ ಹಾಗೂ ರಸ್ತೆಯ ಎರಡೂ ಬದಿಯಲ್ಲಿ ಬಾಕ್ಸ್ ಚರಂಡಿ ನಿರ್ಮಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಸರಕಾರದ ಗಮನಕ್ಕೆ ತರಲಾಗುವುದು ಎಂದು ಭದ್ರಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಕೆ.ಬಿ ಪವಿತ್ರ ರಾಮಯ್ಯ ತಿಳಿಸಿದರು.
ಭದ್ರಾವತಿ ವಿಧಾನಸಭೆ ಕ್ಷೇತ್ರದ ಕೂಡ್ಲಿಗೆರೆ ಗ್ರಾಮದಲ್ಲಿ ಕಳೆದ ತಿಂಗಳು ಸುರಿದ ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ರೈತರ ಜಮೀನಿಗೆ ಅವರು ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳದಲ್ಲಿಯೇ ಸಂಬಂಧ ಪಟ್ಟ ಇಂಜಿನಿಯರ್ ರವರೊಂದಿಗೆ ಚರ್ಚಿಸಿ ಹಾನಿಗೊಳಗಾದ ಪ್ರದೇಶದ ಕಾಮಗಾರಿಯನ್ನು ಎಸ್ಟೀಮೇಷನ್ ರೂಪಿಸುವಂತೆ ತಿಳಿಸಿದರು.
Also read: ಬೆಂಗಳೂರು ಗಾಯತ್ರಿ ಬಡಾವಣೆಗೆ ಶಾಸಕ ಹಾಲಪ್ಪ ಭೇಟಿ: ಮಿಥುನ್ ಕುಟುಂಬಸ್ಥರಿಗೆ ಸಾಂತ್ವಾನ
ಈ ಸಮಸ್ಯೆಯ ಕುರಿತು ಸರಕಾರದ ಗಮನಕ್ಕೆ ತಂದು, ಶೀಘ್ರವಾಗಿ ದುರಸ್ಥಿ ಮಾಡುವಂತೆ ಮನವಿ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವುದು ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ರೈತರ ಪರವಾದ ನಮ್ಮ ಸರಕಾರ ಖಂಡಿತ ಈ ಸಮಸ್ಯೆ ಗೆ ಪರಿಹಾರ ಸೂಚಿಸುವುದು, ಆದ್ದರಿಂದ ರೈತರು ಆತಂಕ ಪಡುವುದು ಬೇಡ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ನಿರ್ದೇಶಕ ಹಾಲೇಶ್, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಅಂಬೋರೆ, ಬಿಜೆಪಿ ಮುಖಂಡ ಎಡೆಹಳ್ಳಿ ಪಾಲಾಕ್ಷಪ್ಪ, ರೈತ ಮಹೇಶಪ್ಪ, ತಾಲ್ಲೂಕು ರೈತ ಮೋರ್ಚಾ ಕಾರ್ಯದರ್ಶಿ ಬಿಳಿಕಿ ಸಂತೋಷ್, ನೀರಾವರಿ ಇಲಾಖೆಯ ಅಭಿಯಂತರ ಯಥೀಶ್ ಮತ್ತು ರೈತ ಮುಖಂಡರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post