ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಿಚಕ್ರ ವಾಹನ ಕಳ್ಳನನ್ನು ಬಂಧಿಸಿರುವ #Two Wheeler Thief Arrest ಭದ್ರಾವತಿಯ ನ್ಯೂ ಟೌನ್ ಠಾಣೆ ಪೊಲೀಸರು #Bhadravathi Police ಆರೋಪಿಯಿಂದ 1.10 ಲಕ್ಷ ಮೌಲ್ಯದ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಭದ್ರಾವತಿ ತಾಲ್ಲೂಕಿನ ಹೆಬ್ಬಂಡಿ ತಾಂಡಾದ ಆರ್.ರಂಗನಾಥ್ ಬಂಧಿತ ಆರೋಪಿ. ಭದ್ರಾವತಿ ಸಿದ್ಧಾಪುರ ಬೈಪಾಸ್ ನ ತಿಬ್ಬಾದೇವಿ ಎಂಜಿನಿಯರಿಂಗ್ ವರ್ಕ್ಸ್ ಮುಂದೆ ನಿಲ್ಲಿಸಿದ್ದ ತಮ್ಮ ಹೊಂಡಾ ಆಕ್ಟಿವಾ ಸ್ಕೂಟರನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಕಳೆದ ಜುಲೈ 16ರಂದು ತರೀಕೆರೆಯ ಬಸವನಗರದ ನವೀನ್ ಎಂಬುವವರು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Also read: ಶಿವಮೊಗ್ಗ | ಪೊಲೀಸರಿಂದ 20 ಟನ್ ಮೆಟ್ರಿಕ್ ಮರಳು ವಶ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post