ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿ ತಾಲ್ಲೂಕಿನ ಕಾಟಿಕೆರೆ ಗ್ರಾಮದ ಸಕ್ರೈಬೈಲು ಸಮೀಪ ಭದ್ರಾ ನದಿಯಲ್ಲಿ ಹಾಗೂ ಮಂಗೋಟೆ ಗ್ರಾಮದ ಸಮೀಪ ತುಂಗಾ-ಭದ್ರಾ ನದಿಯಲ್ಲಿ #Tunga-Bhadra River ಅಕ್ರಮವಾಗಿ ಕಳ್ಳತನ ಮಾಡಿ ಸಂಗ್ರಹಿಸಿ ಇಡಲಾಗಿದ್ದ 20 ಟನ್ ಮೆಟ್ರಿಕ್ ಟನ್ ಮರಳು #Illigal Sand Stock ಪೊಲೀಸರು ವಶಪಡಿಸಿಕೊಂಡಿದ್ದಾರೆ.
Also read: ರಾಜ್ಯದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ಹೆಚ್ಚಿಸಿ | MLC ಧನಂಜಯ ಸರ್ಜಿ ಒತ್ತಾಯ
ಖಚಿತ ಮಾಹಿತಿಯ ಮೇರೆಗೆ ಸಿಪಿಐ ಲಕ್ಷ್ಮೀಪತಿ ನೇತೃತ್ವದ ತಂಡ ದಾಳಿ ನಡೆಸಿ, ಕಾಟಿಕೆರೆ ಗ್ರಾಮದ ಸಕ್ರೈಬೈಲು ಸಮೀಪ ಭದ್ರಾ ನದಿಯ ದಡದಲ್ಲಿ 10 ಮೆಟ್ರಿಕ್ ಟನ್ ಮರಳು ಮತ್ತು ಮಂಗೋಟೆ ಗ್ರಾಮದ ಸಮೀಪದ ಹಾದು ಹೋಗಿರುವ ತುಂಗಾ-ಭದ್ರಾ ನದಿಯ ದಡದಲ್ಲಿ 10 ಮೆಟ್ರಿಕ್ ಟನ್ ಮರಳು ಸೇರಿ ಒಟ್ಟು 20 ಮೆಟ್ರಿಕ್ ಟನ್ ಮರಳು ದಾಸ್ತಾನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post