ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದೇಶದಲ್ಲೇ ವಿಶಿಷ್ಠ ಉಕ್ಕು ಕಾರ್ಖಾನೆ ಎಂದು ಹೆಸರು ಮಾಡಿರುವ ವಿಐಎಸ್’ಎಲ್’ನ ಉತ್ಪಾದನೆಯನ್ನು ಹೆಚ್ಚಿಸಲು ಖಾಸಗಿ ಹೂಡಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿಐಎಸ್’ಎಲ್ ಕಾರ್ಖಾನೆಯು ದೇಶದಲ್ಲಿಯೇ, ಅತಿ ಹೆಚ್ಚು ವಿವಿಧ ಬಗೆಯ, ಅಂದರೆ 730 ಗ್ರೇಡ್ ವಿಶೇಷ ಉಕ್ಕು ತಯಾರಿಸಬಲ್ಲ ಕಾರ್ಖಾನೆಯಾಗಿದ್ದು, ಅಲಾಯ್ ಉಕ್ಕು ತಯಾರಿಕೆ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದೆ. ಈ ಕಾರ್ಖಾನೆಯನ್ನು ಉಳಿಸಿ, ಬೆಳೆಸಲು ಹಾಗೂ ಸುಸೂತ್ರವಾಗಿ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರವು, ಅಗತ್ಯವಿರುವ ಕಬ್ಬಿಣದ ಅದಿರು ಇರುವ ನಿಕ್ಷೇಪವನ್ನು ಮಂಜೂರು ಮಾಡಿದೆ ಎಂದರು.
ಈಗಾಗಲೇ ನೀತಿ ಆಯೋಗವು ವಿಐಎಸ್’ಎಲ್ ಕಾರ್ಖಾನೆಯ ಉತ್ಪಾದನೆಯನ್ನು ಮುಂದುವರೆಸುವ ದೃಷ್ಠಿಯಿಂದ, ಖಾಸಗಿ ಹೂಡಿಕೆ ಆಯ್ಕೆಗೆ ಶಿಫಾರಸ್ಸು ಮಾಡಿದೆ. ಈ ಸಂಬಂಧ ಸೈಲ್ ಸಂಸ್ಥೆಯು, EOI ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಕೆಲ ಸಂಸ್ಥೆಗಳು ಆಸಕ್ತಿ ತೋರಿಸಿದ್ದು, ಅದರಂತೆ ಆರ್’ಎಫ್’ಕ್ಯೂ ಆಹ್ವಾನಿಸಲಾಗಿರುತ್ತದೆ. ಈ ಸಂಬಂಧವಾಗಿ ಕೇಂದ್ರದ ಉಕ್ಕು ಸಚಿವರನ್ನು ಭೇಟಿ ಮಾಡಿದ್ದು, ಈ ಕಾರ್ಖಾನೆಯ ಖಾಸಗಿ ಹೂಡಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹಾಗೂ ಕೈಗಾರಿಕೆಯ ಪುನಶ್ಚೇತನಕ್ಕೆ ವಿನಂತಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post